ADVERTISEMENT

ರಾಷ್ಟ್ರಕವಿ ಪದವಿ ಪುನರಾರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 19:30 IST
Last Updated 6 ಮೇ 2020, 19:30 IST

ನಿಸಾರ್ ಅಹಮದ್‌ ಜನತೆಯ ಕವಿ. ಅವರ ಅನೇಕ ಹಾಡುಗಳು ಜನರ ನಾಲಿಗೆ ಮೇಲಿವೆ. ಅವರು ರಾಷ್ಟ್ರಕವಿ ಆಗಬೇಕಿತ್ತು. ರಾಷ್ಟ್ರಕವಿ ಎಂಬುದು ರಾಜ್ಯ ಸರ್ಕಾರ ನೀಡುತ್ತಾ ಬಂದಿದ್ದ ಒಂದು ಗೌರವ. ಇದುವರೆಗೆ ಅರ್ಹರಿಗೇ ಸಂದಿದೆ.

ಇನ್ನೇನು ನಿಸಾರ್‌ ಅವರಿಗೆ ಬರುತ್ತದೆ ಎನ್ನುವ ಹೊತ್ತಿಗೆ, ‘ರಾಷ್ಟ್ರ ಮಟ್ಟದವರಾಗಿರಬೇಕು!’ ಎಂಬ, ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಕೆಲವು ಸದಸ್ಯರ ವಿಚಿತ್ರ ನಿಲುವಿನಿಂದಾಗಿ ನಿಂತುಹೋಯಿತು.

ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಸಮರ್ಥರು. ಆದರೆ ಡಿವಿಜಿ, ತೇಜಸ್ವಿಯವರಂತಹ ಇನ್ನೂ ಕೆಲವು ಸಮರ್ಥ ಸಾಹಿತಿಗಳು ಜ್ಞಾನಪೀಠಿಗಳಲ್ಲ! ರಾಷ್ಟ್ರಕವಿ ಪದವಿ ನಿರಂತರವಾಗಿ ಇದ್ದರೆ ಇಂತಹ ಪ್ರಾತಿನಿಧಿತ್ವದ ಕೊರತೆಯನ್ನು ತಕ್ಕಮಟ್ಟಿಗೆ ತುಂಬುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಬಹುತೇಕ ಕನ್ನಡ ಸಾಹಿತಿಗಳು ಸಹ ರಾಷ್ಟ್ರಕವಿ ಪದವಿ ಇರಲಿ ಎಂದೇ ಒತ್ತಾಯಿಸುತ್ತಾ ಬಂದಿದ್ದಾರೆ. ಸ್ಥಗಿತಗೊಳಿಸಿರುವ ಈ ಗೌರವವನ್ನು ಸರ್ಕಾರ ಇನ್ನು ಮುಂದಾದರೂ ಮರು ಆರಂಭಿಸಲಿ.

ADVERTISEMENT

-ಗುಡಿಹಳ್ಳಿ ನಾಗರಾಜ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.