‘ಇನ್ನಷ್ಟು ಮಾನವೀಯವಾದ ಸಮಾಜ ಕಟ್ಟೋಣವೇ?’ ಎಂಬ ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಲೇಖನ (ಪ್ರ.ವಾ., ಜೂನ್ 8) ಮನ ತಟ್ಟುವಂತಿದೆ. ಕೊರೊನಾ ವೈರಾಣು ತಂದೊಡ್ಡಿರುವ ಸಂಕಷ್ಟ ಮತ್ತು ಅನಿಶ್ಚಿತತೆಯನ್ನುಇಷ್ಟು ಸವಿಸ್ತಾರವಾಗಿ ಮತ್ತು ಒತ್ತಿ ಹೇಳಿದ ಯಾವ ಉದ್ಯಮಿಯನ್ನೂ ನಾನು ಈವರೆಗೆ ಕಂಡಿಲ್ಲ.
ಈ ಬಿಕ್ಕಟ್ಟಿನ ಕಾಲದಲ್ಲಿ ಕಾರ್ಮಿಕರು, ವಲಸೆ ಹೋಗುವವರು– ಬರುವವರು, ಬಡವರ ಒಟ್ಟು ಬದುಕು, ಆರೋಗ್ಯದ ಬಗ್ಗೆ ಅವರ ಅಪಾರ ಕಾಳಜಿ ಮೆಚ್ಚುವಂಥದ್ದು. ಅವರು ಮುಂದಿಟ್ಟ ಅನೇಕ ಸಲಹೆಗಳನ್ನು ಸರ್ಕಾರ, ಉದ್ಯಮಿಗಳು ಹಾಗೂ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಅವೆಲ್ಲವೂ ನಮ್ಮ ಆರ್ಥಿಕ ವ್ಯವಸ್ಥೆ, ಮಾನವೀಯ ಸಂಬಂಧಗಳಲ್ಲಿ ತೀವ್ರ ಬದಲಾವಣೆ ತರುವುದರಲ್ಲಿ ಸಂದೇಹವಿಲ್ಲ .
–ಸಿದ್ರಾಮಪ್ಪ ದಿನ್ನಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.