ADVERTISEMENT

ಗಾಂಧೀಜಿ ಕೈಹಿಡಿಯದ ಮಣ್ಣಿನ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 18:55 IST
Last Updated 10 ಜೂನ್ 2020, 18:55 IST

ಗಾಂಧೀಜಿ, ಆರೋಗ್ಯ ಕಾಪಾಡಿಕೊಳ್ಳಲು ಮಣ್ಣಿನ ಚಿಕಿತ್ಸೆಯ ಮೊರೆ ಹೋಗುತ್ತಿದ್ದರು ಎಂದುಡಾ. ಎಚ್‌.ಬಿ.ಚಂದ್ರಶೇಖರ್‌ ಹೇಳಿದ್ದಾರೆ (ಸಂಗತ, ಜೂನ್‌ 9). ಆದರೆ, ಗಾಂಧೀಜಿ ಅಪೆಂಡಿಸೈಟಿಸ್‌ನಿಂದ ಬಳಲುತ್ತಿದ್ದಾಗ ಮಣ್ಣಿನ ಚಿಕಿತ್ಸೆ ಉಪಯೋಗಕ್ಕೆ ಬರದೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಕಸ್ತೂರಬಾ ಅವರು ತೀವ್ರ ನ್ಯೂಮೋನಿಯಾದಿಂದ ಬಳಲುತ್ತಿದ್ದಾಗ, ಅಂದಿನ ಮಾಯಾ ಔಷಧವೆಂದೇ ಖ್ಯಾತವಾಗಿದ್ದ ಪೆನ್ಸಿಲಿನ್ ಇಂಜೆಕ್ಷನ್‌ ಬಳಸಬೇಕೆಂದು ವೈದ್ಯರು ಹೇಳಿದ್ದರು. ಇದನ್ನುಗಾಂಧಿ ನಿರಾಕರಿಸಿದಾಗ ಕಸ್ತೂರಬಾ ಬದುಕಬಹುದಾಗಿದ್ದಏಕೈಕ ದಾರಿಯೂ ಮುಚ್ಚಿಹೋಯಿತು. ಅದಾದ ಕೆಲವು ತಿಂಗಳುಗಳ ನಂತರ ಗಾಂಧೀಜಿ ಮಲೇರಿಯಾಗೆ ತುತ್ತಾದಾಗ, ವೈದ್ಯರ ಸಲಹೆಯಂತೆ ಕ್ವಿನೈನ್ ಬಳಸಿ ಗುಣಮುಖರಾದರು.

ಆಧುನಿಕ ಔಷಧ ಈ ನೂರು ವರ್ಷಗಳಲ್ಲಿ ತುಂಬಾ ದೂರಸಾಗಿಬಂದಿದೆ. ಸಿಡುಬು, ಪ್ಲೇಗ್, ಪೋಲಿಯೊ ಹೆಚ್ಚುಕಡಿಮೆ ನಶಿಸಿಹೋಗಿದ್ದು ನೈಸರ್ಗಿಕ ಚಿಕಿತ್ಸೆಯಿಂದಲ್ಲ. ಎಲ್ಲ ಕಾಯಿಲೆಗಳೂ ಮನೆಯ ಔಷಧಗಳಿಂದಲೇ ಗುಣವಾಗುವಂತಿದ್ದರೆ ಭಾರತೀಯನ ಸರಾಸರಿ ಆಯಸ್ಸು ಇಪ್ಪತ್ತನೇ ಶತಮಾನದ ಆರಂಭದವರೆಗೆ ಕೇವಲ ಇಪ್ಪತ್ತೈದರ ಆಸುಪಾಸಿನಲ್ಲಿ ಇರುತ್ತಿರಲಿಲ್ಲ.

ADVERTISEMENT

ಕೊರೊನಾ ಸಾಂಕ್ರಾಮಿಕಕ್ಕೆ ಇನ್ನೂ ಸರಿಯಾದ ಔಷಧ ಕಂಡುಹಿಡಿಯಲು ಆಧುನಿಕ ಔಷಧ ಪದ್ಧತಿ ಸಫಲವಾಗಿಲ್ಲ. ಆದರೆ ಅದಕ್ಕೆ ಪರ್ಯಾಯವಾಗಿ ನೈಸರ್ಗಿಕ ಔಷಧವನ್ನು ಬಳಸಬೇಕೆಂದಿದ್ದರೆ ಅದು ಸಾಕ್ಷ್ಯಾಧಾರಗಳನ್ನು ಆಧರಿಸಿರಬೇಕೇ ಹೊರತು ನಂಬಿಕೆಯ ಮೇಲಲ್ಲ.

-ಸುನೀಲ ನಾಯಕ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.