ADVERTISEMENT

ವಿಶ್ವವಿದ್ಯಾಲಯಕ್ಕೆ ಆಕರ್ಷಕ ಹೆಸರಿರಲಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 19:30 IST
Last Updated 15 ಜೂನ್ 2020, 19:30 IST

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿ ಬದಲಾವಣೆ ಮಾಡಲುರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ವರದಿಯಾಗಿದೆ. ನಗರ, ಗ್ರಾಮಾಂತರ ಎಂಬ ಹೆಸರುಗಳು ಏಕೋ ಆಕರ್ಷಕವೆನಿಸುವುದಿಲ್ಲ. ಒಂದು ವಿಶಿಷ್ಟವಾದ ಹೆಸರು ವಿಶ್ವವಿದ್ಯಾಲಯಕ್ಕೆ ಮೆರುಗು ತರುತ್ತದೆ. ಸಕಾರಾತ್ಮಕ ನೆಲೆಯಲ್ಲಿ ಕೆಲಸ ಮಾಡುತ್ತದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅಥವಾ ಸಾಮಾಜಿಕ ಸುಧಾರಣೆಯಲ್ಲಿ ಛಾಪು ಮೂಡಿಸಿದ ಹಲವಾರು ಮಹನೀಯರು ನಮ್ಮಲ್ಲಿ ಇದ್ದಾರೆ. ಅವರಲ್ಲಿ ಒಬ್ಬರ ಹೆಸರನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಬಳಸಿಕೊಳ್ಳಬಹುದು. ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ, ಸಂವಿಧಾನ ರೂವಾರಿ ಎನಿಸಿಕೊಂಡ ಅಂಬೇಡ್ಕರ್, ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಸಿ.ವಿ.ರಾಮನ್, ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದ ಡಿ.ವಿ.ಗುಂಡಪ್ಪ, ಸರಳ ವ್ಯಕ್ತಿತ್ವದ ವಿಜ್ಞಾನಿಯಾಗಿದ್ದ ಅಬ್ದುಲ್ ಕಲಾಂ... ಹೀಗೆ ನಮಗೆ ಸರಿದಾರಿಯನ್ನು ತೋರಿದ ಮಹಾನ್ ಚೇತನಗಳು ಇವೆ. ಅವರಲ್ಲಿ ಯಾರದಾದರೂ ಒಬ್ಬರ ಹೆಸರು ಆರಿಸಿಕೊಳ್ಳಬಹುದು. ಅದನ್ನು ಬಿಟ್ಟು, ಬೆಂಗಳೂರು ನಗರ, ಗ್ರಾಮಾಂತರ ಎಂಬಂತಹ ಹೆಸರುಗಳು ವಿಶ್ವವಿದ್ಯಾಲಯಕ್ಕೆ ಸಮಂಜಸವಲ್ಲ.

ಛಾಯಾದೇವಿ ಈ.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.