ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಈ ಮಾಸ್ಕ್ ಧಾರಣೆ, ಪರೀಕ್ಷಾ ಕೊಠಡಿಗೆ ಹೋಗುವ ತನಕ ಕಡ್ಡಾಯವಾಗಿದ್ದರೆ ಸಾಕು. ಕೊಠಡಿ ಸೇರಿದ ನಂತರ ಅದನ್ನು ತೆಗೆದಿರಿಸುವುದು ಒಳ್ಳೆಯದು. ಇಲ್ಲದಿದ್ದರೆ, ಮೂರು ಗಂಟೆಗಳ ಕಾಲ ಮಾಸ್ಕ್ ಧರಿಸುವುದರಿಂದ ಉಂಟಾಗುವ ಕಿರಿಕಿರಿಯಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬರುತ್ತದೆ. ಮಾಸ್ಕ್ ಧರಿಸಿರುವಾಗ ಉಸಿರಾಡಲು ಕೂಡ ಸ್ವಲ್ಪ ತಡೆಯಾಗುವುದು ಸುಳ್ಳಲ್ಲ.
ಹೇಗೂ ಥರ್ಮಲ್ ಪರೀಕ್ಷೆ ನಡೆಸಿಯೇ ಒಳಗೆ ಬಿಡುವುದರಿಂದ ಮತ್ತು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುವುದರಿಂದ, ಪರೀಕ್ಷಾ ಕೊಠಡಿಯೊಳಗೆ ಮಾಸ್ಕ್ ಧಾರಣೆಯಿಂದ ವಿನಾಯಿತಿ ನೀಡಬೇಕು.
ಕೆ.ಸದಾಶಿವ, ಸೋಮೇಶ್ವರ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.