ADVERTISEMENT

ಕೌಶಲ, ನೈಪುಣ್ಯ ದೇಶದಲ್ಲೇ ಉಳಿಯುವಂತಾಗಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST

ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಗೆ ಇತ್ತೀಚೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಭರವಸೆ ನೀಡಿರುವುದು ಸ್ವಾಗತಾರ್ಹ. ಇಂತಹದ್ದೊಂದು ಮಂಡಳಿ ಇದೆ ಎನ್ನುವುದೇ ಬಡ ಬ್ರಾಹ್ಮಣರಿಗೆ ಸಂತಸದ ಸಂಗತಿ. ಅನಾದಿ ಕಾಲದಿಂದಲೂ ಬ್ರಾಹ್ಮಣರು ವಿದ್ಯೆಗೆ, ಬುದ್ಧಿಗೆ ಬೆಲೆ ಕೊಡುತ್ತಾ ಬಂದವರು. ಬ್ರಾಹ್ಮಣರು ಆತ್ಮಾಭಿಮಾನಿಗಳಾದ್ದರಿಂದ ದೇಹಿ ಎಂದು ಕೈಚಾಚಲು ಹಿಂದೆ ಸರಿದವರು. ಉಚ್ಚ ಜಾತಿ, ಮುಂದುವರಿದವರು ಎಂಬ ಹಣೆಪಟ್ಟಿ ಕಟ್ಟಿ ಆರ್ಥಿಕವಾಗಿ, ರಾಜಕೀಯವಾಗಿ ಹಿಂದೆ ದೂಡಿದುದೇ ಇವರಲ್ಲಿ ಹೆಚ್ಚಿನವರ ಸ್ಥಿತಿ ಇಂದು ಹೀನಾಯವಾಗಲು ಕಾರಣ.

ಇನ್ನಾದರೂ ಬ್ರಾಹ್ಮಣರ ಸೇವೆಯನ್ನು ದೇಶ ಸದುಪಯೋಗಪಡಿಸಿಕೊಳ್ಳಲಿ. ಮೆರಿಟ್ ಹಾಗೂ ಅರ್ಹತೆಗೆ ಬೆಲೆ ಕೊಡಲಿ. ಬ್ರಾಹ್ಮಣ ಯುವಕರು ದೇಶ ತೊರೆಯದಂತೆ ನೋಡಿಕೊಳ್ಳುವ ಮೂಲಕ ದೇಶದಲ್ಲಿನ ಜಾಣ್ಮೆ, ಕೌಶಲ, ನೈಪುಣ್ಯ, ಪ್ರಾಮಾಣಿಕತೆ ದೇಶದಲ್ಲೇ ಉಳಿಯುವಂತಾಗಲಿ.

ಕೆ.ಸದಾನಂದ ಶಾಸ್ತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.