ಆರು ವರ್ಷಗಳ ಹಿಂದೆ ಪುತ್ರ ಮತ್ತು ಪತಿಯನ್ನು ಕಳೆದುಕೊಂಡ ತಮ್ಮ ತಾಯಿ ನೋವಿನಲ್ಲಿ ಜೀವನ ಸಾಗಿಸುತ್ತಿ ದ್ದರು, ಕ್ರಿಶ್ಚಿಯನ್ ಧರ್ಮಾಚರಣೆ ಮಾಡಿದರೆ ನೋವು ಕಡಿಮೆಯಾಗುತ್ತದೆ ಎಂಬ ಮಾತನ್ನು ನಂಬಿದ್ದ ಆಕೆ ಆ ಧರ್ಮಕ್ಕೆ ಮತಾಂತರಗೊಂಡಿದ್ದು ಈಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಈ ಧರ್ಮದಿಂದ ಆ ಧರ್ಮಕ್ಕೆ, ಆ ಧರ್ಮದಿಂದ ಈ ಧರ್ಮಕ್ಕೆ ಹೋಗಿ ಬರುವುದೆಂದರೆ ಬಟ್ಟೆ ಬದಲಿಸಿದಷ್ಟು ಸುಲಭವಲ್ಲ.
ಯಾವ ಧರ್ಮಾಚರಣೆ ಮಾಡಬೇಕು ಎಂಬುದು ವೈಯಕ್ತಿಕ ವಿಚಾರವಾದರೂ ಪಕ್ಷಾಂತರಗೊಳ್ಳುವ ಧರ್ಮದ ಕುರಿತು ತಿಳಿದುಕೊಳ್ಳಬೇಕು. ಯಾರೋ ಹೇಳಿದರೆಂದೋ ಅಥವಾ ಪ್ರಚೋದನೆ, ಪ್ರಲೋಭನೆಗೋ ಒಳಗಾಗಿ ಧರ್ಮಾಂತರಗೊಂಡಲ್ಲಿ, ಇಲ್ಲಿರಲಾರೆ ಅಲ್ಲಿಗೆ ಮರಳಲಾರೆ ಎಂಬ ದ್ವಂದ್ವ ಸ್ಥಿತಿಯಲ್ಲಿ ಬದುಕಬೇಕಾಗುತ್ತದೆ. ಮತಾಂತರಗೊಳ್ಳುವವರು ಎಲ್ಲವನ್ನೂ ಅಧ್ಯಯನ ಮಾಡಿ ಮುಂದಡಿಯಿಡುವುದು ಸೂಕ್ತ. ಇದು ವರದಿಯಾದ ಒಂದು ಪ್ರಕರಣವಷ್ಟೇ. ಇಂತಹವು ಇನ್ನೆಷ್ಟಿವೆಯೋ?
- ಪತ್ತಂಗಿ ಎಸ್. ಮುರಳಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.