ADVERTISEMENT

ಭಾಷಾ ಮರ್ಯಾದೆ ಮರೆತವರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST

ಕನ್ನಡ ಭಾಷೆ ಕಸ್ತೂರಿಯಂತೆ ಕಂಪು. ಕೋಗಿಲೆ ಸ್ವರದಂತೆ ಇಂಪು. ಆದರೆ ಅದು ರಾಜಕಾರಣಿಗಳ ಬಾಯಿಗೆ ಸಿಲುಕಿ ದುರ್ನಾತ, ಕರ್ಕಶ ಆಗತೊಡಗಿದೆ.

ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಭಾಷೆ ಆ ಜನರ ನೋವು ನಲಿವಿಗೆ ವಾಣಿಯಾಗಬೇಕಿತ್ತು.ಸುಸಂಸ್ಕಾರದ ಕಹಳೆಯಾಗಬೇಕಿತ್ತು.

ಇನ್ನೂ ಒಂದು ದುರಂತ ಎಂದರೆ, ನಾಯಕರು ಒಂದು ಸಲ ಹೇಳಿದ್ದರೆ ನಮ್ಮ ವಾಹಿನಿಗಳು ಅಂತಹ ಅಸಭ್ಯ ಪ್ರಯೋಗವನ್ನು ಪದೇ ಪದೇ ತೋರಿಸುತ್ತಿರುವುದು ಯಾವ ಸಂಭ್ರಮಕ್ಕೋ. ಕೇಳಿ ಕೇಳಿ ನಮಗೆ ಅಸಹ್ಯವಾದರೆ, ಮಕ್ಕಳು ಅದನ್ನೇ ರೂಢಿಸಿಕೊಳ್ಳುತ್ತಾರೆ. ಭಾಷೆ ಮರ್ಯಾದೆ ಕಳೆದುಕೊಳ್ಳುತ್ತದೆ.

ADVERTISEMENT

ಉತ್ತಮ ಭಾಷಾ ಪ್ರಯೋಗದ ಜೊತೆಗೆ, ವಿಷಯ ಮಂಡನೆಯ ಪ್ರೌಢಿಮೆ ಮೆರೆಯುವವರ ಧ್ವನಿಗಳು ನಮ್ಮ ಸಂಸತ್ತಿನಲ್ಲಿ ಮೊಳಗಲಿ.
-ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.