ADVERTISEMENT

ಗಂಟೆ ಹಿಡಿದಿದ್ದವರು ಯಾರು?

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST

ವಾಟ್ಸ್‌ಆ್ಯಪ್‌ನಲ್ಲಿ ಓದಿದ ಕತೆ: ಒಂದು ಪುಟ್ಟ ಹಳ್ಳಿ‌. ಮಧ್ಯರಾತ್ರಿ. ಕಳ್ಳರು ಎಮ್ಮೆಯ ಕೊರಳಿಗೆ ಕಟ್ಟಿದ್ದ ಗಂಟೆಯನ್ನು ಬಿಚ್ಚಿ, ಎಮ್ಮೆಯನ್ನು ಪೂರ್ವ ದಿಕ್ಕಿಗೆ ಹೊಡೆದುಕೊಂಡು ಹೋದರು. ಅವರಲ್ಲೊಬ್ಬ ಗಂಟೆ ಹಿಡಿದುಕೊಂಡು ಪಶ್ಚಿಮ ದಿಕ್ಕಿಗೆ ಓಡಿಹೋದ. ಎಚ್ಚರಗೊಂಡ ಹಳ್ಳಿಯವರು ಗಂಟೆಯ ಶಬ್ದದ ದಿಕ್ಕಿನತ್ತ ಎಮ್ಮೆ ಹುಡುಕುತ್ತಾ ಹೋಗುತ್ತಾರೆ. ಗಂಟೆಯನ್ನು ಎಸೆದು ಆ ಕಳ್ಳ ತಪ್ಪಿಸಿಕೊಂಡು ಹೋದಾಗ, ಹಳ್ಳಿಗರು ಗಂಟೆ ತೆಗೆದುಕೊಂಡು ದುಃಖದಿಂದ ಮರಳುತ್ತಾರೆ. ಎಮ್ಮೆ ಕಳ್ಳರು ಹಿರಿಹಿರಿ ಹಿಗ್ಗುತ್ತಾರೆ.

ಇಲ್ಲಿ ಎಮ್ಮೆ= ದೇಶದ ಸಂಪತ್ತು, ಸಂಪನ್ಮೂಲ, ಜನತಂತ್ರ, ಸ್ವಾತಂತ್ರ್ಯ, ಹಕ್ಕುಗಳು ಇತ್ಯಾದಿ. ಎಮ್ಮೆ ಕಳ್ಳರು= ಹಣತಂತ್ರದ ಕಂಪನಿಗಳು, ವಿಜಯ್‌ ಮಲ್ಯ, ನೀರವ್ ಮೋದಿ ಇತ್ಯಾದಿ.ಗಂಟೆ= ಹಣತಂತ್ರ ಸ್ನೇಹಿ ಟಿ.ವಿ ವಾಹಿನಿಗಳು, ಮಾಧ್ಯಮಗಳು. ಗಂಟೆಯ ಶಬ್ದ= ಪಾಕಿಸ್ತಾನ, ವಾಯುದಾಳಿ, ದೇಶಭಕ್ತಿ, ದೇಶದ ಭದ್ರತೆ, ಧರ್ಮ, ಜಾತಿ, ಮಂದಿರ, ಮಸೀದಿ, ಅಭಿವೃದ್ಧಿ ಇತ್ಯಾದಿ.

ಹಾಗಿದ್ದರೆ ಗಂಟೆ ಹಿಡಿದಿದ್ದ ಕಳ್ಳ ಯಾರು? ದುರಂತ ಏನೆಂದರೆ ಕತೆಯಲ್ಲಿನ ಹಳ್ಳಿಗರಿಗೆ ತಮ್ಮ ಎಮ್ಮೆ ಕಳುವಾದದ್ದು ಗೊತ್ತು. ನಮಗೆ ನಮ್ಮ ಎಮ್ಮೆ ಕಳುವಾದದ್ದು ಇನ್ನೂ ಗೊತ್ತಿಲ್ಲ. ನ್ಯಾಯ-ಅನ್ಯಾಯ, ಸತ್ಯ-ಅಸತ್ಯ, ದೇಶಭಕ್ತಿ-ದೇಶದ್ರೋಹ, ಕಳ್ಳ-ಚೌಕೀದಾರ, ಧರ್ಮ-ಅಧರ್ಮಗಳ ನಡುವಿನ ಗೆರೆ ಅಳಿಸಿ ಹೋಗಿರುವ ಅಸಂಗತ ಕಾಲದಲ್ಲಿದ್ದೇವೆಯೇ?
-ಅಮರೇಶ್ ಎಂ. ಪಾಟೀಲ,ದೇವದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.