ADVERTISEMENT

ಸರ್ಕಾರಿ ಬಸ್‌ಗೇಕೆ ವಿನಾಯಿತಿ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:16 IST
Last Updated 16 ಏಪ್ರಿಲ್ 2019, 20:16 IST

ಚುನಾವಣೆ ನಿಮಿತ್ತವಾಗಿ ಕೆಲವು ಕಡೆ ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದರೆ ಸರ್ಕಾರಿ ವಾಹನಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.

ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಖಾಸಗಿ ವಾಹನಗಳಲ್ಲೇ ಸಾಗಿಸಬೇಕೆಂಬ ನಿಯಮವೇನಾದರೂ ಇದೆಯೇ? ಸರ್ಕಾರಿ ಬಸ್‌ಗಳಲ್ಲಿ ಇಂತಹ ವಸ್ತುಗಳನ್ನು ಸಾಗಿಸಲಾಗುತ್ತಿಲ್ಲ ಎಂದು ಹೇಳುವುದಾದರೂ ಹೇಗೆ? ಹೀಗಾಗಿ, ಸರ್ಕಾರಿ ವಾಹನಗಳನ್ನೂ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಗಮನಹರಿಸಬೇಕು.

-ಹನಮಂತ ಎಂ. ಮಾಗಿ,ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.