ADVERTISEMENT

ದಾಂಪತ್ಯ ಬೆಸೆದ ಚುನಾವಣೆ!

​ಪ್ರಜಾವಾಣಿ ವಾರ್ತೆ
Published 5 ಮೇ 2019, 20:14 IST
Last Updated 5 ಮೇ 2019, 20:14 IST

ಮುನಿಸಿಕೊಂಡ ‘ಆಕೆ’ಯನ್ನು ಒಲಿಸಿಕೊಳ್ಳಲು ‘ಆತ’ ಮಾಡುವ ಕಸರತ್ತು ನೂರಾರು. ಇದಕ್ಕೊಂದು ಹೊಸ ಸೇರ್ಪಡೆ. 6 ವರ್ಷ ಸಂಸಾರ ಮಾಡಿ ಯಾವುದೋ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಕಳೆದ 5 ವರ್ಷಗಳಿಂದ ಬೇರೆ ಬೇರೆ ಇದ್ದ ದಂಪತಿಗೆ, ಚುನಾವಣೆಯೊಂದು ದಾಂಪತ್ಯವನ್ನು ಬೆಸೆಯುವ ದಾರಿಯಾಗಿರುವುದು ನೆರೆಯ ತೆಲಂಗಾಣದಿಂದ ವರದಿಯಾಗಿದೆ.

ಶಾಸಕರೊಬ್ಬರ ಮಧ್ಯಸ್ಥಿಕೆಯಿಂದ, ಮಂಡಲ ಪರಿಷತ್‌ನ ಚುನಾವಣೆಗೆ ಪತ್ನಿಗೆ ಟಿಕೆಟ್ ಕೊಡಿಸುವ ಮುಖೇನ ದಾಂಪತ್ಯದ ಬಿರುಕನ್ನು ಮುಚ್ಚುವಲ್ಲಿ ಯಶಸ್ಸು ಸಿಕ್ಕಿದೆ. ‘ನಾನೊಂದು ತೀರ ನೀನೊಂದು ತೀರ’ ಎಂದಿದ್ದ ಈ ಜೋಡಿ ಈಗ ‘ನನ್ನ ಜೀವ ನೀನು’ ಎಂದು ಹಾಡುವ ಹಾಗೆ ಮಾಡಿದ್ದು ಚುನಾವಣೆ.

ಅಲ್ಲಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಇನ್ನೊಂದು ಮಜಲಿನ ಸಾಕ್ಷಾತ್ಕಾರ ಆದಂತಾಯಿತು. ಈ ಹಿಂದೆ, ಮುನಿದ ಅರ್ಧಾಂಗಿಯನ್ನು ಸುಶ್ರಾವ್ಯ ಗಾಯನದ ಮೂಲಕ ಒಲಿಸಿಕೊಂಡ ಘಟನೆ ನೆನಪಾಯಿತು. ಕಾಲಗರ್ಭದಲ್ಲಿ ಇನ್ನೂ ಏನೇನು ನೋಡಲಿಕ್ಕಿದೆಯೋ?
-ವೆಂಕಟೇಶ ಮುದಗಲ್,ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.