ADVERTISEMENT

ಫೇಲಾದ ಮಕ್ಕಳಿಗೆ ಧೈರ್ಯ ತುಂಬಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:15 IST
Last Updated 7 ಮೇ 2019, 20:15 IST

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳ ಭವಿಷ್ಯದ ಮಹತ್ವದ ಘಟ್ಟಗಳು. ಹಾಗಾಗಿಯೇ, ಹೆಚ್ಚು ಅಂಕಗಳನ್ನು ಪಡೆದವರಿಗೆ ವಿಶೇಷ ಗೌರವ ದೊರೆಯುವುದು ಸಹಜ.

ಆದರೆ ತಮ್ಮ ಸಾಧಾರಣ ಬುದ್ಧಿಮಟ್ಟದಿಂದಲೋ, ಮನೆಯ ಆರ್ಥಿಕ ದುಃಸ್ಥಿತಿಯ ಕಾರಣದಿಂದಲೋ, ಶಾಲಾ ಕಾಲೇಜುಗಳ ಅಸಮರ್ಪಕ ನಿರ್ವಹಣೆಯಿಂದಲೋ ಅಥವಾ ಅಲಕ್ಷ್ಯದಿಂದಲೋ ಫೇಲಾಗುವ ಮಕ್ಕಳಿಗೆ ಫಲಿತಾಂಶವು ಸ್ವಯಂ ಅವಲೋಕನ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಕೆಲವರು ದೃಢ ಮನಸ್ಸಿನಿಂದ ಸವಾಲಾಗಿ ಸ್ವೀಕರಿಸಿ ಪೂರಕ ಪರೀಕ್ಷೆ ಎದುರಿಸಿ ಯಶಸ್ವಿಯಾಗುತ್ತಾರೆ. ದುರ್ಬಲ ಮನಸ್ಸಿನ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಹಾಗಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಸರ್ಕಾರ ಸಹ ಇಂತಹ ಮಕ್ಕಳ ಪ್ರೋತ್ಸಾಹಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು.
-ಹೊಡೇನೂರು ಪರಮೇಶ್, ಅರಕಲಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.