ADVERTISEMENT

ಹೈ.ಕ: ಶಾಲಾ ರಜೆ ವಿಸ್ತರಿಸಿ

​ಪ್ರಜಾವಾಣಿ ವಾರ್ತೆ
Published 28 ಮೇ 2019, 18:14 IST
Last Updated 28 ಮೇ 2019, 18:14 IST

ಹೈದರಾಬಾದ್– ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ತೀವ್ರವಾಗಿದೆ. ಮಾರ್ಚ್ ಆರಂಭದಿಂದಲೇ ಬಿಸಿಲ ಝಳ ಒಂದು ರೀತಿಯ ಅಘೋಷಿತ ಕರ್ಫ್ಯೂ ವಿಧಿಸಿದೆ.ಮುಂಜಾನೆಯಿಂದ ಸಂಜೆವರೆಗೂ ಜನ ಹೊರಬರಲು ಅಂಜುವಂತಾಗಿದೆ. ಇಂತಹುದರ ಮಧ್ಯೆ ಇಂದಿನಿಂದ (29) ಇಲ್ಲಿ ಶಾಲೆಗಳು ಪ್ರಾರಂಭಗೊಳ್ಳುತ್ತಿವೆ.

ಕೆಲವೆಡೆ 3ರಿಂದ 5 ಕಿ.ಮೀ.ವರೆಗೂ ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಬಿಸಿಲ ಝಳಕ್ಕೆ ನಿರ್ಜಲೀಕರಣದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.

ಪಕ್ಕದ ತೆಲಂಗಾಣ ರಾಜ್ಯದಲ್ಲಿ ಜೂನ್‌ ಒಂದರಿಂದ ಶಾಲೆಗಳು ಆರಂಭವಾಗಬೇಕಿತ್ತು. ಆದರೆ ಕಡು ಬಿಸಿಲಿನಿಂದ ಮಕ್ಕಳ ಆರೋಗ್ಯ ಕಾಪಾಡಲು ಜೂನ್ 12ರವರೆಗೂ ರಜೆಯನ್ನು ವಿಸ್ತರಿಸಲಾಗಿದೆ. ಹೈ.ಕ. ಭಾಗದ ಜಿಲ್ಲೆಗಳಲ್ಲೂ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳ ರಜೆಯನ್ನು ಜೂನ್ ಅಂತ್ಯದವರೆಗೂ ವಿಸ್ತರಿಸುವುದು ಒಳಿತು.
-ಭಾಗ್ಯಶ್ರೀ ಎಸ್. ಪಾಟೀಲ,ಐನಾಪೂರ, ಯಡ್ರಾಮಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.