ADVERTISEMENT

ದಾಂದಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 18:24 IST
Last Updated 6 ಜನವರಿ 2020, 18:24 IST

ಯಾರು ಬೇಕಾದರೂ ಯಾವುದೇ ಸಂಘಟನೆ- ಸಂಘದ ಹೆಸರಿನಲ್ಲಿ, ಇನ್ನೊಬ್ಬರಿಗೆ ಗಾಸಿ ಮಾಡದೆ ಸಕಾರಣವಾಗಿ ಪ್ರತಿಭಟಿಸುವ ಹಕ್ಕು ಸಂವಿಧಾನದತ್ತ ವರವಾಗಿದೆ. ಆದರೂ ಜವಾಹರಲಾಲ್‌ ನೆಹರೂ
ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ವಿವಿಧ ಕಾರಣಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಇಂಥ ವೇಳೆ, ಸಿನಿಮೀಯ ರೀತಿಯಲ್ಲಿ ಕ್ಯಾಂಪಸ್‌ಗೆ ನುಗ್ಗಿ ಅವರನ್ನು ಬಡಿಯುವುದು ನಾಗರಿಕ ವರ್ತನೆಯಲ್ಲ.

ಬಹುಶಃ ಯಾವ ಪ್ರಾಣಿಯೂ ತನ್ನ ಆಹಾರಕ್ಕಲ್ಲದೆ ಇನ್ನೊಂದು ಪ್ರಾಣಿಯ ಆವಾಸಸ್ಥಾನಕ್ಕೆ ನುಗ್ಗಿ ಸುಖಾಸುಮ್ಮನೆ ಬಡಿಯುವುದಿಲ್ಲ, ಹಿಂಸಿಸಿ ಖುಷಿಪಡುವುದಿಲ್ಲ. ಅಂದರೆ, ಬಡಿದು-ಕೊಂದು ತನ್ನತ್ತ ತಲೆಯೆತ್ತದಂತೆ ಮಾಡುವ ಹೊಸದೊಂದು ‘ಸನಾತನ’ ಪ್ರಾಣಿ ಸೃಷ್ಟಿಯಾಗುತ್ತಿದೆ ಎಂದಾಯಿತು. ಹಿಂಸೆಗೆ ಹಿಂಸೆಯೇ ಪ್ರತಿರೋಧ
ವಾದರೆ, ಅನಾಗರಿಕ ನಡವಳಿಕೆಯೇ ಈ ದೇಶದ ಹೊಸ ಕಾನೂನಾಗಿಬಿಡುತ್ತದೆ. ವಿದ್ಯಾರ್ಥಿಗಳು ಗೂಂಡಾಗಳಾಗಿ ಬೀದಿಬೀದಿಯಲ್ಲಿ ಇರಿದುಕೊಳ್ಳಬೇಕಾಗುತ್ತದೆ. ಕಾಲೇಜಿನ ಕ್ಯಾಂಪಸ್‍ಗೆ ನುಗ್ಗಿ ದಾಂದಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕಾದ ತುರ್ತಿದೆ.

-ಡಾ. ಶಾಂತರಾಜು ಎಸ್., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.