ADVERTISEMENT

ನೇಮಕಾತಿಯಲ್ಲಿ ರಾಜಕೀಯ ಸಲ್ಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST

ಲೋಕೋಪಯೋಗಿ ಇಲಾಖೆಗೆ ಹಿಂದಿನ ಸರ್ಕಾರ ಮಾಡಿದ್ದ ಎಂಜಿನಿಯರ್‌ಗಳ ನೇಮಕಾತಿಯ ಫಲಿತಾಂಶ ಪ್ರಕಟಣೆಯನ್ನು ಇಂದಿನ ಸರ್ಕಾರ ತಡೆಹಿಡಿದಿದೆ (ಪ್ರ.ವಾ., ಅ. 14). ಹೊಸ ಸರ್ಕಾರವು ಹಿಂದಿನ ಸರ್ಕಾರದ ಯೋಜನೆಗಳನ್ನು ಪರಿಷ್ಕರಿಸುವುದು ಸಾಮಾನ್ಯ.

ಆದರೆ ನೇಮಕಾತಿ ವಿಷಯಕ್ಕೆ ಬಂದಾಗ ಅದು ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿರುತ್ತದೆ ಮತ್ತು ನೇಮಕಾತಿ ಎನ್ನುವುದು ರಾಜಕೀಯೇತರ ವಿಷಯ. ಆದ್ದರಿಂದ ಫಲಿತಾಂಶ ನೀಡುವುದು ಪರೀಕ್ಷಾ ಪ್ರಾಧಿಕಾರದ ಕರ್ತವ್ಯ. ನೇಮಕಾತಿಗೆ ಅಧಿಸೂಚನೆ ಹೊರಡಿಸುವಾಗಲೇ ಪರೀಕ್ಷೆ ನಡೆಸುವ, ಫಲಿತಾಂಶ ಪ್ರಕಟಿಸುವ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದರೆ ಅನುಕೂಲವಾಗುತ್ತದೆ.

ಪರೀಕ್ಷೆ ಬರೆದು ವರ್ಷಾನುಗಟ್ಟಲೆ ಕಾಯುವ ವ್ಯವಧಾನ ಯಾವ ಅಭ್ಯರ್ಥಿಯಲ್ಲಿಯೂ ಇರಲು ಸಾಧ್ಯವಿಲ್ಲ ಮತ್ತು ಮನೆಯ ಪರಿಸ್ಥಿತಿಗೆ ಅನುಗುಣವಾಗಿ ಬೇರೆ ಯಾವುದಾದರೂ ಉದ್ಯೋಗ ಹುಡುಕಿಕೊಳ್ಳುವುದು ಅನಿವಾರ್ಯವೂ ಆಗಬಹುದು. ಪರೀಕ್ಷೆ ನಡೆದ ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟಿಸುವುದು ಒಳ್ಳೆಯದು.
-ಅರವಿಂದ ಬೇವಿನಗಿಡದ, ಕೋಹಳ್ಳಿ, ಅಥಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.