ADVERTISEMENT

ಮೆಚ್ಚುಗೆಗೆ ಅರ್ಹವಾದ ದಿಟ್ಟತನ; ಅಕ್ರಮಕ್ಕೆ ಕನ್ನಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST

ರಿಯಾಲಿಟಿ ಷೋಗಳಲ್ಲಿ ವಿಜೇತರನ್ನು ಮೊದಲೇ ನಿರ್ಧರಿಸಲಾಗಿರುತ್ತದೆ ಎಂಬ ಹಿನ್ನೆಲೆ ಗಾಯಕಿ ಬಿ.ಕೆ. ಸುಮಿತ್ರಾ ಅವರ ಅನಿಸಿಕೆ (ಪ್ರ.ವಾ. ಅ.6) ಓದುಗರು ಹಾಗೂ ವೀಕ್ಷಕರಲ್ಲಿ ವಿಸ್ಮಯ ಮೂಡಿಸಿದೆ. ಟಿಆರ್‌ಪಿಗಾಗಿ, ಜಾಹೀರಾತಿಗಾಗಿ ವೀಕ್ಷಕರನ್ನು ವಂಚಿಸುವ ಇಂತಹ ಷೋಗಳ ಒಳಹುನ್ನಾರಗಳಿಗೆ ಕನ್ನಡಿ ಹಿಡಿದಿರುವ ಸುಮಿತ್ರಾ ಅವರ ದಿಟ್ಟತನ ಮೆಚ್ಚತಕ್ಕ ಅಂಶ.

‘ಮೂಟೆಗಳಲ್ಲಿ ತರುತ್ತಾರೆ ಆಟೊ ಮೀಟರ್’ ವರದಿಯು (ಪ್ರ.ವಾ. ಅ. 6) ಆಟೊರಿಕ್ಷಾ ಮೀಟರ್‌ಗಳಲ್ಲಿನ ಅಂಕಿಗಳ ಜಿಗಿತದ ಪವಾಡವನ್ನು ಜನರ ಎದುರು ತೆರೆದಿಟ್ಟಿದೆ. ಪ್ರಯಾಣಿಕರಲ್ಲಿ ಈ ಕುರಿತು ಅರಿವು, ಎಚ್ಚರ ಮೂಡಿಸಿದೆ. ಬೆಂಗಳೂರಿನಲ್ಲಿ ಈ ಹಾವಳಿ ಹೆಚ್ಚು.

‘ಅಧಿಕಾರಿಗಳಿಂದ ಮಾಮೂಲಿ ವಸೂಲಿ ಅವ್ಯಾಹತ’ವಾಗಿ ನಡೆದಿರುವ ಬಗ್ಗೆ ವರದಿಯೊಂದು ಬೆಳಕು ಚೆಲ್ಲಿದೆ (ಪ್ರ.ವಾ. ಅ. 6). ರೈತರನ್ನು ಶೋಷಿಸುವ ಅಧಿಕಾರಿಗಳು, ಪೊಲೀಸರು, ರೌಡಿಗಳ ವಿರುದ್ಧ ಬಿಬಿಎಂಪಿ ಮೇಯರ್ ಹಾಗೂ ಬೆಂಗಳೂರಿನ ಶಾಸಕರು, ಸಚಿವರು ಯಾವ ಕ್ರಮ ಕೈಗೊಂಡಿದ್ದಾರೆ? ಮಾಮೂಲಿ ಪಾಲು ಇವರಿಗೂ ಸೇರುತ್ತದೆಯೇ!
-ಕಾಡನೂರು ರಾಮಶೇಷ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.