ADVERTISEMENT

ಸಂಸ್ಕೃತಿ ಪ್ರತಿನಿಧಿಸುವ ಗಾಯಕನಿಗೆ ಮುಜುಗರ: ನೋವಿನ ಸಂಗತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 20:30 IST
Last Updated 4 ನವೆಂಬರ್ 2019, 20:30 IST
   

ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಲನಚಿತ್ರ ನಟ–ನಟಿಯರ ಜತೆ ಇತ್ತೀಚೆಗೆ ಭೇಟಿಯಾದಾಗ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಸರ ವ್ಯಕ್ತಪಡಿಸಿದ್ದು ವರದಿಯಾಗಿದೆ (ಪ್ರ.ವಾ., ನ.4).

ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಭಾರತದ ಭಾಷೆಗಳಿಗಷ್ಟೇ ಅಲ್ಲ ಬಾಲಿವುಡ್‌ನ ಅನೇಕ ಸಿನಿಮಾಗಳಿಗೂ ಹಿನ್ನೆಲೆ ಗಾಯನ ನೀಡಿದ್ದಾರೆ. ಅವರ ಕಂಠದಿಂದ ಬಂದ ನೂರಾರು ಹಿಂದಿ ಹಾಡುಗಳು ಸಾಕಷ್ಟು ಜನಪ್ರಿಯವೂ ಆಗಿವೆ. ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದಾರೆ. ಮೇಲಾಗಿ, ಅವರು ಉತ್ತರ ಭಾರತೀಯರಿಗೆ ಅಪರಿಚಿತ ವ್ಯಕ್ತಿಯೇನೂ ಅಲ್ಲ. ಹೀಗಿರುವಾಗ, ಸನಾತನ ಸಂಸ್ಕೃತಿ, ಭಾರತೀಯ ಸಂಪ್ರದಾಯಗಳನ್ನು ಪ್ರತಿಪಾದಿಸುವವರೇ ಎಸ್‌ಪಿಬಿ ಜೊತೆ ಈ ರೀತಿ ನಡೆದುಕೊಂಡಿದ್ದು ಸರಿಯೇ?

ಭಾರತೀಯ ಕಲೆ– ಸಂಸ್ಕೃತಿಗಳ ಪ್ರತಿನಿಧಿಯಂತಿರುವ ಗಾಯಕನಿಗೆ ಮುಜುಗರ ಉಂಟುಮಾಡಿರುವುದು ಅವರ ಅಭಿಮಾನಿಗಳಾದ ನಮಗೂ ನೋವು ತಂದಿದೆ.
–ಮೂರ್ತಿ ತಿಮ್ಮನಹಳ್ಳಿ, ಹೊಸಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.