ADVERTISEMENT

ಶತಕದಾಟ- ಕಾಟ

ಮಹಾಂತೇಶ ಮಾಗನೂರ
Published 2 ಸೆಪ್ಟೆಂಬರ್ 2018, 18:46 IST
Last Updated 2 ಸೆಪ್ಟೆಂಬರ್ 2018, 18:46 IST

ಬೌನ್ಸರ್‌ಗಳ ಮಧ್ಯೆ ಒಂದೊಂದೇ ರನ್ ಪೇರಿಸಿ

ಪೂರೈಸಿದರು ನಮ್ಮ ಸಿ.ಎಂ. ಶತಕ

ಕಾಯ್ದು ನೋಡಬೇಕು ಈ ಇನಿಂಗ್ಸ್ ಎಲ್ಲಿತನಕ?

ADVERTISEMENT

ಪಿಚ್ ತಿರುವು ಪಡೆಯುತ್ತಿದೆ ಕ್ಷಣ ಕ್ಷಣ

ಸ್ವಪಕ್ಷೀಯರಿಂದಲೇ ರನ್ ಔಟ್ ಆಗೋ ಲಕ್ಷಣ

ಆಡುವ ಬಳಗ (ಸಂಪುಟ) ಸೇರಲು ಜಿದ್ದಾಜಿದ್ದಿ

ಪತ್ರಿಕೆಗಳ ತುಂಬ ಇದೇ ಸುದ್ದಿ

ಎಲ್ಲೆಂದರಲ್ಲಿ ಕಾಲೆಳೆಯುವ ವೀಕ್ಷಕ ವಿವರಣೆ

ಯಾರಿಗೂ ಬೇಕಿಲ್ಲ ಪ್ರೇಕ್ಷಕರ ಬವಣೆ

ಕುತೂಹಲ– ಯಾವಾಗ ಉರಳುತ್ತೋ ವಿಕೆಟ್

ಕಾಯ್ತಿದ್ದಾರೆ ವಿರೋಧಿಗಳು ಹಿಡ್ಕೊಂಡು ಟಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.