ADVERTISEMENT

ಉದ್ದು ಹುರಿಯುವರೇ?

ಮೋಹನ್ ದಾಸ್ ಶೆಟ್ಟಿ, ಬೆಂಗಳೂರು
Published 2 ಸೆಪ್ಟೆಂಬರ್ 2018, 18:37 IST
Last Updated 2 ಸೆಪ್ಟೆಂಬರ್ 2018, 18:37 IST

‘ಪ್ರಜಾವಾಣಿ’ಯ ಭಾನುವಾರದ (ಸೆ. 2) ಸಂಚಿಕೆಯಲ್ಲಿ ಮುಖ್ಯಮಂತ್ರಿಯ ಜನತಾದರ್ಶನದ ಸುದ್ದಿ ಮತ್ತು ಕೆ. ರತ್ನಪ್ರಭಾ ಅವರ ‘ಅವಲೋಕನ’ ಅಂಕಣದಲ್ಲಿ ವಿಷಯದ ಸಾಮ್ಯತೆ ಕಂಡುಬಂತು. ಎರಡನ್ನೂ ಓದಿದ ಬಳಿಕ, ‘ನಮ್ಮ ಅಧಿಕಾರಿಗಳೇನು ಉದ್ದು ಹುರಿಯುತ್ತಾರಾ’ ಎಂಬ ಪ್ರಶ್ನೆ ಮೂಡಿತು.

ನಮ್ಮಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಶಾಸಕರು, ಮಂತ್ರಿಗಳು, ಅಧಿಕಾರಿವರ್ಗ ಇರುವಾಗ, ಜನರ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಯವರೇ ತಲೆ ಮೇಲೆ ಹೊತ್ತುಕೊಳ್ಳುವ ಅಗತ್ಯ ಇದೆಯೇ ಎಂಬುದು ನನ್ನನ್ನು ಬಲವಾಗಿಕಾಡುತ್ತಿರುವ ಪ್ರಶ್ನೆ. ಇವರಿಗೆಲ್ಲಾ ದೊಡ್ಡ ಮೊತ್ತದ ಸಂಬಳ, ಸವಲತ್ತು ಕೊಡುವುದೇಕೆ? ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಬಿಡುಗಡೆಯಾದ ಹಣ ಇರುವುದು ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT