
ಪ್ರಜಾವಾಣಿ ವಾರ್ತೆಕಾಳ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯಾದಲ್ಲಿ ನೀರಿನ ಹಾಹಾಕಾರದಿಂದ ಸಾವಿರಾರು ಒಂಟೆಗಳ ಹತ್ಯೆಗೆ ಯೋಜನೆ ರೂಪಿಸಿರುವುದು (ಪ್ರ.ವಾ., ಜ. 9) ಖಂಡನೀಯ. ಮಾನವನ ಅತಿಯಾದ ಹಸ್ತಕ್ಷೇಪದಿಂದ ಉಂಟಾದ ಕಾಳ್ಗಿಚ್ಚಿಗೆ ಮೂಕಪ್ರಾಣಿಗಳ ಮೇಲೆ ಹಗೆ ತೀರಿಸಿಕೊಳ್ಳುವುದು ಒಪ್ಪತಕ್ಕದ್ದಲ್ಲ. ಮಾನವ ತನ್ನ ಸ್ವಾರ್ಥವನ್ನು ಬದಿಗಿಟ್ಟು, ಒಂಟೆಗಳನ್ನು ಕೊಲ್ಲುವ ಬದಲು ಅವುಗಳನ್ನು ಉಳಿಸಲು ಪರ್ಯಾಯ ಯೋಜನೆ ರೂಪಿಸಲಿ.
-ಚೇತನ್ ವೀರಸಂಗಪ್ಪ,ಆವರಗೊಳ್ಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.