ADVERTISEMENT

ಶಿಕ್ಷಕ ಮಹಾಶಯನನ್ನು ದೂಷಿಸುವ ಮುನ್ನ...

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 20:00 IST
Last Updated 10 ಜನವರಿ 2020, 20:00 IST

ಶಾಲೆಯಲ್ಲಿ ಬಾಲಕನೊಬ್ಬನಿಂದ ‘ಪಕ್ಕೆಲುಬು’ ಎಂದು ಹೇಳಿಸಲು ಹೋಗಿ, ಅದು ಸಾಧ್ಯವಾಗದೆ ಆ ಮಗುವಿಗೆ ಮಾನಸಿಕವಾಗಿ ಹಿಂಸೆ ನೀಡಿದ ‘ಗುರು’ವೊಬ್ಬರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವಿಕೃತಿಯೇ ಸರಿ. ‘ಆಸ್ಪತ್ರೆ’ ಎಂಬ ಪದವನ್ನು ಹುಡುಗನೊಬ್ಬ ‘ಅಪ್ಪಾಸತ್ರೆ’ ಎಂದು ಹೇಳಿದ ಎಂದು ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಹೇಳಿದ್ದರು. ಮಕ್ಕಳ ಉಚ್ಚಾರವನ್ನು ಹೀಗೆ ವ್ಯಂಗ್ಯ ಮಾಡುವುದು ದುರದೃಷ್ಟಕರ. ‘ಅ’ಕಾರಕ್ಕೆ ‘ಹ’ಕಾರ, ‘ಶ’ಕಾರಕ್ಕೆ ‘ಸ’ಕಾರ, ಉತ್ಸಾಹಕ್ಕೆ ಉಸ್ತಾಹ ಹೀಗೆಲ್ಲ ಕೆಲವರು, ಅದರಲ್ಲೂ ಗ್ರಾಮೀಣ ಭಾಗದವರು ಉಚ್ಚರಿಸುವುದು ಸಹಜ.

ಕನ್ನಡೇತರರು, ಬುಡಕಟ್ಟು ಸಮುದಾಯದವರು, ಮುಸ್ಲಿಮರು ಕೆಲವರು ಕನ್ನಡದ ಕೆಲವು ಪದಗಳನ್ನು ತಮ್ಮದೇ ಆದ ರೀತಿಯಲ್ಲಿ ಉಚ್ಚರಿಸುತ್ತಾರೆ. ವಿಶೇಷವಾಗಿ ಸಂಸ್ಕೃತದ ಪ್ರಭಾವದಿಂದ ಕನ್ನಡ ಮತ್ತಷ್ಟು ಶ್ರೀಮಂತವಾಗಿದೆ. ಕರ್ನಾಟಕದಲ್ಲಿ ನುಡಿಯಲಾಗುವ ಕನ್ನಡವು ವೈವಿಧ್ಯದಿಂದ ಕೂಡಿದೆ. ವಾಸ್ತವದಲ್ಲಿ, ನಾವು ರೂಢಿ ಮಾಡಿಕೊಂಡಿರುವ ಇಂಗ್ಲಿಷ್‌ ಪದಗಳು ಮೂಲೋಚ್ಚಾರಣೆಯೊಂದಿಗೆ ವ್ಯತ್ಯಾಸವನ್ನು ಹೊಂದಿವೆ. ಈಗ ಆ ಶಿಕ್ಷಕ ಮಹಾಶಯನನ್ನು ದೂಷಿಸುವುದರ ಜೊತೆಗೆ, ನಮ್ಮಲ್ಲಿರುವ ಕುಹಕತನವನ್ನೂ ಬಿಡಬೇಕಾಗಿದೆ.

ಸನ್ಮತಿ ನಾಯಕ್,ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.