ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಒಂದು ರೀತಿಯ ದುಃಖ, ಆತಂಕಪಡುವಂತೆ ಮಾಡುತ್ತಿವೆ. ಹೈದರಾಬಾದ್‌ನಲ್ಲಿ ಅತ್ಯಾಚಾರದ ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್‌ನಂಥ ಸಂದರ್ಭದಲ್ಲೋ ಅಥವಾ ಈ ಬಗೆಯ ಅಪರಾಧಿಗಳಿಗೆ ಆಗುವ ಶಿಕ್ಷೆ ತಿಳಿದಾಗಲೋ ಸಂಭ್ರಮಿಸುವುದು, ಸಿಹಿ ಹಂಚುವುದು ಸರಿಯೇ? ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಬೇರೆಯವರು ಅಂತಹ ತಪ‍್ಪನ್ನು ಮಾಡದಿರಲಿ, ಶಿಕ್ಷೆಯ ಭಯವಿರಲಿ ಎಂದು. ಆದರೆ ಆ ಉದ್ದೇಶ ಮರೆತು, ಅದಕ್ಕಾಗಿ ಸಂಭ್ರಮಿಸುವುದು ಮಾನವೀಯತೆಯೇ?
ಸಂತೋಷ್ ಎಚ್. ರಾಯ್ಕರ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.