ADVERTISEMENT

ನೀರಿನ ಬಾಟಲಿ: ರಿಯಾಯಿತಿ ದರ ಇರಲಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST

ಕೇರಳದಲ್ಲಿ ಒಂದು ಲೀಟರ್ ಖನಿಜಯುಕ್ತ ಕುಡಿಯುವ ನೀರಿನ ಬಾಟಲ್‌ಗೆ ಗರಿಷ್ಠ ₹13 ನಿಗದಿ ಮಾಡಿ ಅಲ್ಲಿನ ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ನಮ್ಮ ರಾಜ್ಯದಲ್ಲಿ ಒಂದು ಲೀಟರ್ ನೀರಿನ ಬೆಲೆ ₹20 ಎಂದು ನಿಗದಿ ಮಾಡಿದ್ದರೂ ಕೆಲ ಹೋಟೆಲ್‌ಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ನಿಲ್ದಾಣಗಳಲ್ಲಿ ನಿಗದಿತ
ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಇದು ಗಮನಕ್ಕೆ ಬಂದರೂ ಸಂಬಂಧಿಸಿದ
ಅಧಿಕಾರಿಗಳು ಜಾಣಕುರುಡು, ಜಾಣಕಿವುಡುತನದಿಂದ ಇರುವುದು ಗುಟ್ಟಾಗೇನೂ ಉಳಿದಿಲ್ಲ. ಈ ವಿಚಾರದಲ್ಲಿ ಭಾರತೀಯ ರೈಲ್ವೆಯ ನಡೆ ಉತ್ತಮವಾಗಿದೆ. ಅದು ತನ್ನದೇ ಆದ ‘ರೇಲ್ ನೀರ್’ ಮೂಲಕ ಜನರಿಗೆ ಕಡಿಮೆ ಬೆಲೆಗೆ ನೀರು ನೀಡುತ್ತಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖನಿಜಯುಕ್ತ ನೀರನ್ನು ರಿಯಾಯಿತಿ ದರದಲ್ಲಿ ನೀಡುವುದು ಒಳ್ಳೆಯದು.

ಸಿ.ಜಿ.ವೆಂಕಟೇಶ್ವರ, ಚೌಡಗೊಂಡನಹಳ್ಳಿ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT