ADVERTISEMENT

ತ್ವರಿತವಾಗಿ ನಿಷೇಧವಾಗಲಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:45 IST
Last Updated 7 ಏಪ್ರಿಲ್ 2020, 19:45 IST

ಉಗುಳಿನ ಮೂಲಕ ಕೊರೊನಾ ವೈರಸ್ ಹರಡುವುದು ದೃಢಪಟ್ಟಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಚೂಯಿಂಗ್ ಗಮ್, ಬಬಲ್‌ ಗಮ್, ಗುಟ್ಕಾ (ಅಗಿಯುವ ತಂಬಾಕು), ಪಾನ್ ಮಸಾಲಾ, ಪರಿಮಳಯುಕ್ತ ಅಥವಾ ಸುವಾಸನೆಯ ತಂಬಾಕು ಖರ್ರಾ (ತಂಬಾಕಿನ ಪುಡಿ ಸಂಯೋಜನೆ), ಅಡಿಕೆ, ಸುಣ್ಣ, ಕಾಚುಗಳ ಮಾರಾಟ ಮತ್ತು ವಿತರಣೆಯನ್ನು ಕನಿಷ್ಠಪಕ್ಷ ಆಗಸ್ಟ್‌ತನಕವಾದರೂ ಸಂಪೂರ್ಣವಾಗಿ ನಿಷೇಧಿಸಬೇಕು.

ಇವನ್ನು ತಿನ್ನುವವರಲ್ಲಿ ಕೊರೊನಾ ಸೋಂಕಿದ್ದು, ಅವರು ಅದನ್ನು ತಿಂದು ಎಲ್ಲೆಂದರಲ್ಲಿ ಬಿಸಾಡಿದರೆ, ಅವುಗಳ ಸಂಪರ್ಕಕ್ಕೆ ಬರುವವರಿಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೆ ಈ ಮಾದಕ ವಸ್ತುಗಳು ಮನುಷ್ಯನ ಆರೋಗ್ಯ ಹಾಗೂ ವೈರಸ್ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತವೆ. ಹೀಗಾಗಿ ಸರ್ಕಾರವು ಸಿಗರೇಟ್ ಮತ್ತು ಬೀಡಿಯನ್ನೂ ಅನಿರ್ದಿಷ್ಟಾವಧಿಯವರೆಗೆ ತ್ವರಿತವಾಗಿ ನಿಷೇಧಿಸಬೇಕಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಇಂತಹ ಕ್ರಮಗಳು ನೆರವಾಗುತ್ತವೆ.

- ವಿಜಯ್‌ಕುಮಾರ್ ಎಚ್.ಕೆ., ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.