ADVERTISEMENT

ವಾಚಕರ ವಾಣಿ: ಮೂಕಪ್ರಾಣಿಗಳ ರೋದನ ನಿಲ್ಲಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST

ಮಂಡ್ಯದ ಸಂತೇಬಾಚಹಳ್ಳಿಯ ಕೆಲ ರೈತರು ಊರಿನ ದೇವಸ್ಥಾನದ ಬಳಿ ಗಂಡು ಕರು ಮತ್ತು ವಯಸ್ಸಾದ ದನಗಳನ್ನು ಬಿಟ್ಟು ಹೋಗುತ್ತಿರುವುದರಿಂದ, ಅವು ಮೇವು, ನೀರಿಲ್ಲದೆ ಸಾವಿಗೀಡಾಗುತ್ತಿರುವುದನ್ನು ತಿಳಿದು (ಪ್ರ.ವಾ., ಫೆ. 21) ಬಹಳ ನೋವಾಯಿತು. ಇಂಥ ಸಮಸ್ಯೆ ನಿವಾರಣೆಗೆ ಅಗತ್ಯ ಗೋಶಾಲೆಗಳನ್ನು ತೆರೆಯಬೇಕು. ಅವು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಮೂಲಕ ಹಸುಗಳನ್ನು ಸಂರಕ್ಷಿಸಿ, ಕಾಲಕಾಲಕ್ಕೆ ಅವುಗಳಿಗೆ ಮೇವು, ನೀರು ಸಿಗುವಂತೆ ನೋಡಿಕೊಳ್ಳಬೇಕು. ಇದರಿಂದ ಮೂಕಪ್ರಾಣಿಗಳ ರೋದನ ನಿಲ್ಲುವಂತಾಗಲಿ.

–ಡಾ. ಮುರುಗೇಶ ಸಂಗಮ, ಬಸವನಬಾಗೇವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT