ವಿಶ್ವ ಗೆಳೆಯರ ದಿನದ ಪ್ರಯುಕ್ತ ಪ್ರಕಟವಾದ ಸತೀಶ್ ತೀರ್ಥಹಳ್ಳಿ ಅವರ ಲೇಖನ (ಪ್ರ.ವಾ. ಜುಲೈ 28) ಮನಮೋಹಕ ಭಾವಗುಚ್ಛದಂತಿತ್ತು. ನಾವೆಲ್ಲಾ ಗೆಳೆಯ, ಗೆಳತಿಯರು ಮತ್ತೆ ಮತ್ತೆ ಓದಿ ಭಾವುಕರಾದೆವು. ಬದುಕಿನ ನೈಜ ಮೌಲ್ಯವಾದ ಪ್ರೀತಿ- ಗೆಳೆತನಕ್ಕಿಂತ ದೊಡ್ಡ ಸಂಪತ್ತು ಮತ್ತೇನಿರಲು ಸಾಧ್ಯ?
ಲೇಖನದ ಒಂದೊಂದು ಸಾಲಿನಲ್ಲೂ ಅಭಿವ್ಯಕ್ತಗೊಂಡ ಪದವಿನ್ಯಾಸ, ಕಾವ್ಯಾತ್ಮಕತೆ, ಆರ್ದ್ರತೆಯು ಜೀವನಪ್ರೀತಿಯನ್ನು ಉಕ್ಕಿಸುವಂತಿದ್ದವು. ನಶಿಸಿ ಹೋಗುತ್ತಿರುವ ಮನುಷ್ಯ ಸಂಬಂಧವನ್ನು ಮರುಸ್ಥಾಪಿಸಲು ಇಂತಹ ಲೇಖನಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು.
-ಪ್ರಿಯದರ್ಶಿನಿ, ಸುಮನಾ ವಶಿಷ್ಟ, ನಾದ ಕೆ.ಆರ್.,ಕೂಡಿಗೆ, ಸೋಮವಾರಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.