ADVERTISEMENT

ವಾಚಕರ ವಾಣಿ | ಪ್ರತಿಭಟನೆಗೆ ಅನ್ಯ ದಾರಿ ಇರಲಿಲ್ಲವೇ?

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 19:30 IST
Last Updated 29 ಜುಲೈ 2020, 19:30 IST

ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರೋಧಿಸಿ ಕೆಲ ಸಂಘಟನೆಗಳು ಬುಧವಾರ ಮಂಡ್ಯ ಬಂದ್‌ಗೆ ಕರೆ ಕೊಟ್ಟಿದ್ದವು. ಮಂಡ್ಯ ರೈತರ ಜೀವನಾಡಿಯಾದ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗೆ ಇಲ್ಲಿನವರು ಹೋರಾಟ ಮಾಡದೆ ಮತ್ಯಾರು ಮಾಡುತ್ತಾರೆ? ಆದರೆ, ವ್ಯಾಪಾರ– ವಹಿವಾಟು ತೆವಳುತ್ತಾ ಸಾಗಿರುವ ಈ ದಿನಗಳಲ್ಲಿ ‘ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ಬಂದ್‌ನ ದಾರಿ ಹಿಡಿಯುವುದು ಬೇಸರದ ಸಂಗತಿ. ಪ್ರತಿಭಟನೆಗೆ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಯೋಚನೆ ಮಾಡಬಹುದಿತ್ತು.

ಮಂಜುನಾಥ್‌,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT