ADVERTISEMENT

ಭ್ರಷ್ಟಾಚಾರವೆಂಬ ವೈರಸ್‌ಗೆ ಬೀಳಲಿ ಕಡಿವಾಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 18:34 IST
Last Updated 24 ನವೆಂಬರ್ 2020, 18:34 IST

ಸರ್ಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಉದ್ದೇಶದ ಕರಡುವಿನ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ ಪ್ರಸ್ತುತ ಅಗತ್ಯವಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ನಿಯಮ ಅಲ್ಲ, ಭ್ರಷ್ಟ ಅಧಿಕಾರಿಗಳಾಗದಂತೆ ಅವರನ್ನು ನಿಯಂತ್ರಿಸುವ ಕಾನೂನು. ಸರ್ಕಾರಿ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಹರಡಿ ಕೊಂಡಿರುವ ಭ್ರಷ್ಟಾಚಾರವೆಂಬ ವೈರಸ್‌ನ ನಿಯಂತ್ರಣ ಈಗಾಗಲೇ ಸಾಧ್ಯವಿಲ್ಲದಂತಾಗಿದೆ. ಇನ್ನೂ ತಡಮಾಡಿದರೆ ಯಾವ ಪ್ರತಿರೋಧಗಳಿಗೂ ಇದು ಮಣಿಯಲಾರದು.

ಸರ್ಕಾರಿ ವ್ಯವಸ್ಥೆಯಲ್ಲಿ ಈ ಪರಿ ನ್ಯೂನತೆಗಳಿರುವಾಗ ಈ ಕರುಡುವಿನ ವಿಷಯವೇ ಅಪ್ರಸ್ತುತ. ಪ್ರತೀ ಯೋಜನೆಯಲ್ಲಿಯೂ ಪರ್ಸೆಂಟೇಜ್‌, ಹುದ್ದೆ ಭರ್ತಿ ಮಾಡುವಲ್ಲಿ ಭ್ರಷ್ಟಾಚಾರ, ಸಂಬಳ ಕೊಡಲು, ಬಾಕಿ ಸಂಬಳ ಪಾವತಿಸಲು ಕಮಿಷನ್‌, ವರ್ಗಾವಣೆಗೆ ಲಂಚ ಇಂಥವಕ್ಕೆಲ್ಲ ಮೊದಲು ಕಡಿವಾಣ ಹಾಕಬೇಕಾಗಿದೆ.
-ಧನ್ಯ ಬಾಳಿಗಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT