ADVERTISEMENT

ಪ್ರಜಾತಂತ್ರ ವ್ಯವಸ್ಥೆಗೆ ಕನ್ನಡಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 21:24 IST
Last Updated 21 ಡಿಸೆಂಬರ್ 2020, 21:24 IST

ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿಯ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಯಾಗಿ ಭಿಕ್ಷುಕರೊಬ್ಬರನ್ನು ನಿಲ್ಲಿಸಿರುವ ವರದಿಯನ್ನು (ಪ್ರ.ವಾ ಡಿ. 21) ಓದಿ ತುಂಬಾ ಆಶ್ಚರ್ಯವಾಯಿತು. ಈ ಮೊದಲು, ಗ್ರಾಮದ ಅಭಿವೃದ್ಧಿ ಮಾಡುವರೆಂದು ನಂಬಿ ಗೆಲ್ಲಿಸಿದ ಅಭ್ಯರ್ಥಿಗಳು ಜನರನ್ನು ನಿರ್ಲಕ್ಷಿಸಿ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು, ಗ್ರಾಮಕ್ಕೆ ಮೂಲಸೌಕರ್ಯ ಒದಗಿಸದೇ ಇರುವುದು ನಾಚಿಕೆಗೇಡಿನ ಸಂಗತಿ.

ಈಗಿನ ಅಭ್ಯರ್ಥಿಗಳು ಜಾತಿ, ಹಣ, ಮದ್ಯದ ಆಮಿಷಗಳನ್ನೊಡ್ಡಿ ಚುನಾವಣೆ ಎದುರಿಸುತ್ತಿರುವುದರ ನಡುವೆಯೂ ಅಲ್ಲಿನ ಯುವಕರು, ಹಣವಿಲ್ಲದ ವ್ಯಕ್ತಿಯೂ ಗೆಲ್ಲಬೇಕು ಎಂಬ ಕಾರಣ ನೀಡಿ ಭಿಕ್ಷುಕ ವ್ಯಕ್ತಿಯನ್ನು ‌ಚುನಾವಣೆಗೆ ನಿಲ್ಲಿಸಿದ್ದಾರೆ. ಇದು, ಪ್ರಜಾತಂತ್ರ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
-ಶ್ರೀಧರ ಎಸ್. ವಾಣಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT