ADVERTISEMENT

ವಾಚಕರ ವಾಣಿ | ದೇಶದ ಸವಾಲುಗಳ ಬಗ್ಗೆ ನಡೆಯಲಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 19:42 IST
Last Updated 16 ಆಗಸ್ಟ್ 2022, 19:42 IST

ಶಿವಮೊಗ್ಗದಲ್ಲಿ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್‌ ಅವರ ಫ್ಲೆಕ್ಸ್‌ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಅದು ಬಿಗುವಿನ ವಾತಾವರಣಕ್ಕೆ ಕಾರಣವಾಗಿದ್ದು ವಿಷಾದಕರ. ಫ್ಲೆಕ್ಸ್‌ ಹಾಕುವುದು ಅಥವಾ ಹಾಕದೇ ಇರುವುದರಿಂದ ಇಬ್ಬರೂ ನಾಯಕರ ಬಗೆಗಿನ ನಮ್ಮ ಅಭಿಪ್ರಾಯ ಬದಲಾಗುವುದಿಲ್ಲ. ಮೆಚ್ಚುಗೆ ಹಾಗೂ ವಿರೋಧವು ಪ್ರಜಾತಂತ್ರ ವ್ಯವಸ್ಥೆಯ ಲಕ್ಷಣವಾಗಿದ್ದು, ಭಿನ್ನಾಭಿಪ್ರಾಯಗಳನ್ನು ಪರಸ್ಪರ ಗೌರವಿಸುವಂತಾದರೆ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

ದುರದೃಷ್ಟವೆಂದರೆ, ಇಂಥ ವಿಚಾರಗಳ ಬಗ್ಗೆ ಅನವಶ್ಯಕವಾಗಿ ಉದ್ವಿಗ್ನ ವಾತಾವರಣ ಉಂಟಾಗಿ, ಅದು ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರ ಅಗತ್ಯವಿದೆಯೇ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಸಂಭ್ರಮದ ಆಚರಣೆಗಳಲ್ಲಿ ಜನರು ರಾಜಕೀಯಪ್ರೇರಿತ ಭಾವನೆಗಳಿಂದ ದೂರವಿರಬೇಕು. ಸ್ವಾತಂತ್ರ್ಯಾನಂತರದ ನಮ್ಮ ಸಾಧನೆಗಳನ್ನು ಸ್ಮರಿಸಬೇಕು. ಕೊರತೆಗಳನ್ನು ಗುರುತಿಸಬೇಕು ಮತ್ತು ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ಸಮಸ್ಯೆಗಳ ನಿವಾರಣೆಗೆ ಬೇಕಾದಪರಿಹಾರೋಪಾಯಗಳ ಬಗ್ಗೆ ಗಮನಹರಿಸುವ ಕಡೆ ನಮ್ಮ ಚರ್ಚೆ, ಚಿಂತನೆಗಳು ಹೊರಳಬೇಕು.
ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT