ADVERTISEMENT

ವಾಚಕರ ವಾಣಿ | ತಪ್ಪು ಸಂದೇಶ ರವಾನೆಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 20:52 IST
Last Updated 14 ಆಗಸ್ಟ್ 2022, 20:52 IST

ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಭಾನುವಾರ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ ಕರ್ನಾಟಕ ಸರ್ಕಾರದ ಜಾಹೀರಾತು ವಿವಾದಿತ ಎನ್ನದೇ ವಿಧಿಯಿಲ್ಲ. ಯಾರಾದರೂ ತಪ್ಪಿ ನಡೆದರೆ ಉತ್ತರ ಕರ್ನಾಟಕದ ಆಡು ಮಾತಿನಲ್ಲಿ ‘ಇದು ಧರ್ಮ ಅಲ್ಲ ಲೇ, ತಮ್ಮಾ’ ಎಂದು ಬುದ್ಧಿ ಹೇಳುವುದುಂಟು. ಸದರಿ ಜಾಹೀರಾತಿನಲ್ಲಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಂತಿದೆ. ಹಾಗಾದರೆ ದೇಶಕ್ಕೆ ನೆಹರೂ ಅವರ ಕೊಡುಗೆ ಏನೇನೂ ಇಲ್ಲವೆ?

ಹಟಕ್ಕೆ ಬಿದ್ದವರಂತೆ ಸಾವರ್ಕರ್ ಚಿತ್ರವನ್ನು ಮೊದಲ ಸಾಲಿನಲ್ಲೇ ಪ್ರಕಟಿಸಲಾಗಿದೆ. ಸರ್ಕಾರದ ಈ ನಡೆಯಲ್ಲಿ ಅಜೆಂಡಾ ಆಧಾರಿತ ರಾಜಕೀಯದ ಛಾಯೆ ಇರುವುದು ಸ್ಪಷ್ಟ. ನೆಹರೂ ಭಾವಚಿತ್ರ ಕೈಬಿಟ್ಟ ಪ್ರಮಾದಕ್ಕೆಮುಖ್ಯಮಂತ್ರಿಯವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ತಪ್ಪು ಸಂದೇಶ ರವಾನೆಯಾಗುವುದು ಖಚಿತ.
–ಈರಪ್ಪ ಎಂ. ಕಂಬಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT