ADVERTISEMENT

ವಾಚಕರ ವಾಣಿ | ರಾಗಿ ಖರೀದಿ: ರಾಜ್ಯ ಆಸ್ಥೆ ವಹಿಸಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST

ಒಕ್ಕೂಟ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ರಾಗಿ ಕ್ವಿಂಟಲ್‌ಗೆ ₹ 3,377ರಂತೆ 2.1 ಲಕ್ಷ ಟನ್ನುಗಳನ್ನು ಖರೀದಿಸುವ ಮಿತಿ ನಿಗದಿಪಡಿಸಿದೆ. 2021-22ರಲ್ಲಿ ಅಂದಾಜು 15 ಲಕ್ಷ ಟನ್ ರಾಗಿ ಬೆಳೆದಿದ್ದಾರೆ ರೈತರು. ಖರೀದಿ ಕೇಂದ್ರಗಳು ಮುಚ್ಚಿರುವುದರಿಂದ ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 1,500ರಿಂದ ₹ 2,000 ದರದಲ್ಲಿ ಮಾರಾಟ ಮಾಡಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಯಲ್ಲಿ ಶೇ 50ರಷ್ಟನ್ನು ಸ್ವಂತಕ್ಕೆ, ಬೀಜಕ್ಕೆ ಮತ್ತು ಇತರ ಉಪಯೋಗಕ್ಕೆ ಬಳಸಿ ಉಳಿದದ್ದನ್ನು ಮಾರಾಟ ಮಾಡು ತ್ತಾರೆ. ಅಂದರೆ ಸರ್ಕಾರ ಪ್ರೊಕ್ಯೂರ್ ಮಾಡಬೇಕಾದದ್ದು 7.5 ಲಕ್ಷ ಟನ್ನುಗಳು. ಇದರಲ್ಲಿ ಒಕ್ಕೂಟದ ಪಾಲು 2.1 ಲಕ್ಷ ಟನ್ನು. ರಾಜ್ಯ ಖರೀದಿಸಬೇಕಾದದ್ದು 5.4 ಲಕ್ಷ ಟನ್ನುಗಳು.

ಕ್ವಿಂಟಲ್‌ಗೆ ₹ 3,377ರಂತೆ 5.4 ಲಕ್ಷ ಟನ್ನುಗಳಿಗೆ ಅಗತ್ಯವಾದ ಹಣ ₹ 1,823.58 ಕೋಟಿ. ಸರ್ಕಾರದ ವಾರ್ಷಿಕ ಬಜೆಟ್ ₹ 2.5 ಲಕ್ಷ ಕೋಟಿಯಲ್ಲಿ ಇದು ಅತಿ ಸಣ್ಣ ಮೊತ್ತ (ಶೇ 4.56). ಆದರೆ, ಇದು ರಾಗಿ ಬೆಳೆದ ರೈತರಿಗೆ ಸಾವು-ಬದುಕಿನ ಪ್ರಶ್ನೆ. ಆದ್ದರಿಂದ ಒಕ್ಕೂಟ ಸರ್ಕಾರವನ್ನು ಹಣಕ್ಕಾಗಿ ಮತ್ತು ಹಿಂದಿನ ವರ್ಷಗಳ ಎಂಎಸ್‌ಪಿ ಬಾಕಿ ಗಾಗಿ (₹ 3,000 ಕೋಟಿ) ಬೇಡುವುದನ್ನು ಬಿಟ್ಟು ನೇರವಾಗಿ ತನ್ನ ಹಣದಿಂದಲೇ ರಾಗಿಯನ್ನು ಎಂಎಸ್‍ಪಿ ದರದಲ್ಲಿ ಖರೀದಿಸಿ ರೈತರ ಬದುಕನ್ನು ಕಾಪಿಡುವುದು ಅಗತ್ಯ.

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.