ADVERTISEMENT

ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ: ನಿಯಮ ಬದಲಿಸಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:45 IST
Last Updated 28 ಫೆಬ್ರುವರಿ 2020, 19:45 IST

ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸದೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಬಳಸುವುದರಿಂದ ಸಂವಹನಕ್ಕೆ ತೊಂದರೆಯುಂಟಾಗಿ, ಬ್ಯಾಂಕುಗಳ ವ್ಯವಹಾರ ಹೆಚ್ಚಳಕ್ಕೆ ಅಡತಡೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ ಮತ್ತು ಬ್ಯಾಂಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬ್ಯಾಂಕ್‌ ಸಿಬ್ಬಂದಿಯು ಸ್ಥಳೀಯ ಭಾಷೆ ಬಳಸದ್ದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯ ಭಾಷೆ ಬರುವವರನ್ನು ನೇಮಿಸಬೇಕೆಂದು ಆಗ್ರಹಿಸಿ ಕನ್ನಡಿಗರು ಹೋರಾಟ ಮಾಡಿದ್ದು ಮತ್ತು ತಮಗೆ ಮನವಿ ಸಲ್ಲಿಸಿದ್ದನ್ನು ಸಚಿವೆ ಮರೆತಿರುವಂತಿದೆ. ಪರಭಾಷಿಕರನ್ನು ಬ್ಯಾಂಕುಗಳಿಗೆ ನೇಮಿಸಿ, ಅವರಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ ಎನ್ನುವುದು ಎಷ್ಟು ಸೂಕ್ತ? ಮೊದಲು ನೇಮಕಾತಿ ನಿಯಮಾವಳಿಯನ್ನು ಬದಲಿಸಿ, ನಂತರ ಅಧಿಕಾರಿಗಳು ಮತ್ತು ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡರೆ ಅದಕ್ಕೆ ಅರ್ಥವಿರುತ್ತದೆ.

-ರಮಾನಂದ ಶರ್ಮಾ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.