ADVERTISEMENT

ವಾಚಕರ ವಾಣಿ | ಯೋಗ ಕೇಂದ್ರ, ಜಿಮ್‌ಗೆ ಅನುಮತಿ ಸಲ್ಲ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 19:30 IST
Last Updated 30 ಜುಲೈ 2020, 19:30 IST

ಕೊರೊನಾ ಸೋಂಕು ವ್ಯಾಪಿಸಿರುವ ಈ ಸಂದರ್ಭದಲ್ಲಿ, ಲಾಕ್‌ಡೌನ್ ಸಡಿಲಿಕೆ ನಿಯಮದಡಿ ರಾಜ್ಯದಲ್ಲಿ ಯೋಗ ಕೇಂದ್ರ, ಜಿಮ್ ತೆರೆಯಲು ಅವಕಾಶ ಕೊಡಲು ನಿರ್ಧರಿಸಿರುವುದು ಎಷ್ಟರಮಟ್ಟಿಗೆ ಸರಿ? ಯೋಗಾಭ್ಯಾಸ ಮಾಡುವವರು ತಮ್ಮ ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಅದನ್ನು ಮಾಡಬಹುದು. ಹಾಗೆಯೇ ಜಿಮ್‌ಗೆ ಹೋಗುತ್ತಿದ್ದವರು ಕೂಡ ಪರಿಕರಗಳಿಲ್ಲದೆ ತಾತ್ಕಾಲಿಕವಾಗಿ ದೈಹಿಕ ಕಸರತ್ತು ನಡೆಸಬಹುದು. ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಇದು ಒಳ್ಳೆಯದು.

ಒಂದುವೇಳೆ ಯೋಗ ಕೇಂದ್ರಗಳನ್ನು ತೆರೆದಲ್ಲಿ, 60 ವರ್ಷ ಮೇಲ್ಪಟ್ಟ ಹಿರಿಯರನ್ನು ಬರದಂತೆ ನಿಯಂತ್ರಿಸಲು ಸಾಧ್ಯವೇ? ತುಂಬಾ ಅನಿವಾರ್ಯವಾಗಿ ತೆರೆಯಲೇಬೇಕು ಎಂಬವುಗಳ ಪಟ್ಟಿಗೆ ಸೇರದ ಇವುಗಳನ್ನು, ಇನ್ನಷ್ಟು ದಿನ ತೆರೆಯದಿರುವುದೇ ಲೇಸಲ್ಲವೇ?

-ಅರ್ಚನಾ ಶಂಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.