ADVERTISEMENT

ನಿಂಬೆಪ್ರಿಯ ರೇವಣ್ಣ; ವೈಚಾರಿಕತೆ ಎಲ್ಲಣ್ಣ?

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 18:35 IST
Last Updated 14 ಏಪ್ರಿಲ್ 2019, 18:35 IST

ಮೊದಲೆಲ್ಲ ವಾಸ್ತುವಿನ ಮೇಲಿನ ಅತಿಯಾದ ನಂಬಿಕೆಯಿಂದ ಸುದ್ದಿಯಾಗುತ್ತಿದ್ದ ಸಚಿವ ಎಚ್‌.ಡಿ.ರೇವಣ್ಣ, ಈಗ ಹೋದಲ್ಲಿ ಬಂದಲ್ಲಿ ನಿಂಬೆಹಣ್ಣುಗಳನ್ನು ಕೈಯಲ್ಲಿ ಹಿಡಿದು ಜನರ ಬಾಯಿಗೆ ಆಹಾರವಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಹೆಚ್ಚೇನೂ ಓದದ ಸಚಿವರ ಇಂತಹ ಕಾರ್ಯವು ಪ್ರಜ್ಞಾವಂತರಲ್ಲಿ ಜುಗುಪ್ಸೆ ಹುಟ್ಟಿಸುತ್ತಿದೆ.

ಹೊಟ್ಟೆಪಾಡಿಗೆ ಜ್ಯೋತಿಷ ಹೇಳುವವರ ಮಾತನ್ನು ನಂಬುವ ರೇವಣ್ಣ ಸ್ವಲ್ಪವೂ ಮುಜುಗರವಿಲ್ಲದೆ ಸಾರ್ವಜನಿಕರ ಎದುರೇ ನಿಂಬೆಹಣ್ಣುಗಳನ್ನು ಪ್ರದರ್ಶಿಸುತ್ತಾರೆ. ಜನಪ್ರತಿನಿಧಿಯಾದವನು ಎಲ್ಲ ವರ್ಗದ ಜನರನ್ನೂ ಪ್ರತಿನಿಧಿಸುತ್ತಾನೆ.

ಆತನ ನಡವಳಿಕೆಇತರರಿಗೆ ಮಾದರಿಯಾಗಿ ಇರಬೇಕು. ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ತನ್ನ ನಡೆನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ಸಾರ್ವಜನಿಕವಾಗಿ ಸಹಿ ಹಾಕುವ ಮುನ್ನ ‘ವಾಸ್ತು ಸರಿಯಿಲ್ಲ’ ಎಂದು ಟೇಬಲ್ ಅನ್ನು ಸರಿಸುವ, ಎಲ್ಲರೆದುರೇಅರ್ಚಕರನ್ನು ಬೈಯುವ ನಡವಳಿಕೆಗಳಿಂದ ಅವರಿಗೆ ಸೂಕ್ಷ್ಮ ಗ್ರಹಿಕೆ ಹಾಗೂ ಜ್ಞಾನದ ಕೊರತೆ ಇದೆ ಎಂಬುದು ತಿಳಿಯುತ್ತದೆ.

ADVERTISEMENT

ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ವೈಚಾರಿಕ ನಿಲುವುಳ್ಳವರು. ಅವರೊಂದಿಗೆ ರೇವಣ್ಣ ಅವರಿಗೆ ಸ್ನೇಹಪೂರ್ವಕ ಸಂಬಂಧ ಇದೆ. ಪ್ರತಿಯೊಂದಕ್ಕೂ ಕಾಲ, ಗಳಿಗೆ, ವಾಸ್ತು, ಮಂತ್ರಗಳೆಂದು ನಂಬುವ ರೇವಣ್ಣ, ಅವರನ್ನು ನೋಡಿ ಕಲಿಯಲಿ.
-ಶ್ರೀಧರ್ ಡಿ. ರಾಮಚಂದ್ರಪ್ಪ,ತುರುವನೂರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.