ADVERTISEMENT

ಯುದ್ಧವಲ್ಲ, ಇದು ಹಬ್ಬ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 18:35 IST
Last Updated 14 ಏಪ್ರಿಲ್ 2019, 18:35 IST

ಚುನಾವಣೆಯನ್ನು ಮಹಾಯುದ್ಧ ಎಂಬಂತೆ ಕೆಲವು ಟಿ.ವಿ. ವಾಹಿನಿಗಳು ಬಿಂಬಿಸುತ್ತಿವೆ. ಇದು ತಪ್ಪು. ಚುನಾವಣೆ ಸ್ಪರ್ಧಾತ್ಮಕವಾಗಿ ಇರಬೇಕೇ ವಿನಾ ದ್ವೇಷ- ಯುದ್ಧದ ರೀತಿ ಇರಬಾರದು. ದೇಶ ಮುಖ್ಯ, ಪ್ರತೀ ಪ್ರಜೆಯ ಅಭಿವೃದ್ಧಿ ಮುಖ್ಯ.

ಹೀಗಾಗಿ, ನಮ್ಮ ಭವಿಷ್ಯ ನಮ್ಮ ತುದಿ ಬೆರಳಿನಲ್ಲಿದೆ ಎಂದು ಅರಿತು ಮತದಾನ ಮಾಡಬೇಕು. ಯಾವುದೇ ಕ್ಷಣಿಕ ಆಮಿಷಕ್ಕೆ ಬಲಿಯಾಗಿ, ಪೂರ್ವಗ್ರಹ ಪೀಡಿತರಾಗಿ ಮತದಾನ ಮಾಡಬಾರದು.

ಹಾಗೆಯೇ ಆ ಪಕ್ಷ ಈ ಪಕ್ಷ ಎಂದು ವೈಯಕ್ತಿಕವಾಗಿ ದ್ವೇಷ ಭಾವನೆ ಬೆಳೆಸಿಕೊಂಡರೆ ಪ್ರಯೋಜನವಿಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಿಲ್ಲ, ಮಿತ್ರರೂ ಇಲ್ಲ. ಚುನಾವಣೆ ನಂತರ ಯಾರೆಲ್ಲ ಒಂದಾಗುತ್ತಾರೆ ಎಂದು ಹೇಳಲಾಗದು. ಆದರೆ ಕಾರ್ಯಕರ್ತರು ಮಾತ್ರ ಹೊಡೆದಾಡಿಕೊಂಡು ಶತ್ರುಗಳಾಗಿಯೇ ಉಳಿದುಬಿಡುತ್ತಾರೆ.

ADVERTISEMENT

ಅದಕ್ಕೆ ಅವಕಾಶ ಕೊಡದೆ, ಚುನಾವಣೆಯನ್ನು ಹಬ್ಬದಂತೆ ಅಥವಾ ಕ್ರೀಡೆಯ ರೀತಿ ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು.
-ಆರ್.ಚಂದ್ರಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.