ADVERTISEMENT

ಭಾರತೀಯ ಸಂಪ್ರದಾಯಗಳಲ್ಲಿ ವಿರೋಧಾಭಾಸ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:38 IST
Last Updated 17 ಅಕ್ಟೋಬರ್ 2018, 17:38 IST

ಭಾರತೀಯ ಸಂಪ್ರದಾಯಗಳಲ್ಲಿ ಹಲವು ವಿರೋಧಾಭಾಸಗಳಿವೆ. ಒಂದೆಡೆ ಮಹಿಳೆಯರು ಶಬರಿಮಲೆ ದೇವಸ್ಥಾನದೊಳಗೆ ಹೋಗಬಾರದು ಎನ್ನುತ್ತೇವೆ. ಇನ್ನೊಂದೆಡೆ ದೇವಿಯನ್ನು ಮಹಿಳೆಯ ಗುಪ್ತಾಂಗ ರೂಪದಲ್ಲಿಯೇ ಪೂಜಿಸುತ್ತೇವೆ.

ಆಸ್ಸಾಂನ ಕಾಮಾಖ್ಯ ದೇವಳ,ಕೇರಳದ ಭಗವತಿ ದೇವಳಗಳು ಮತ್ತು ನಮ್ಮ ಕನ್ನಡ ಕರಾವಳಿಯ ಹಲವು ದೇಗುಲಗಳಲ್ಲಿ ಪೂಜೆಗೊಳ್ಳುವ ಮೂಲ ಪ್ರತಿಮೆಗಳು ಶಕ್ತಿಲಿಂಗ ರೂಪದಲ್ಲಿವೆ. ಅವು ತುಂಬಾ ಮಹಿಮೆ ಉಳ್ಳವು ಎಂಬ ಗಾಢ ನಂಬಿಕೆ ಇದೆ.

ಸಂಸ್ಕೃತದಲ್ಲಿ ‘ಭಗ’ ಎಂದರೆ ಮಹಿಳೆಯ ಗುಪ್ತಾಂಗ. ಈ ಶಬ್ದದಿಂದಲೇ ಭಗವತಿ,ಭಗವಂತ,ಭಗವಾನ್‌ ಶಬ್ದಗಳು ಹುಟ್ಟಿವೆ. ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸೃಷ್ಟಿಯ (Reproduction) ಪ್ರತೀಕವಾಗಿ ಶಕ್ತಿಲಿಂಗವನ್ನು ಪೂಜಿಸುವವರು ಜೀವಂತ ಮಹಿಳೆಯನ್ನು ಮಾತ್ರ ದೇವಸ್ಥಾನದೊಳಗೆ ಬಿಡದಿರುವಂತಹ ವೈರುಧ್ಯಮಯ ಸಂಪ್ರದಾಯ ಬಹುಶಃ ಜಗತ್ತಿನಲ್ಲಿ ಬೇರೆಲ್ಲೂ ಇರಲಿಕ್ಕಿಲ್ಲ!

ADVERTISEMENT

-ಉದಯರಾಜ್ಆಳ್ವ,ಕಾಟಿಪಳ್ಳ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.