ಅಡಿಕೆಯ ಧಾರಣೆಯು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕಳೆದ ತಿಂಗಳಿನಲ್ಲಿ ಪ್ರತಿ ಕ್ವಿಂಟಲ್‌ಗೆ ₹ 38 ಸಾವಿರ ಇದ್ದ ಧಾರಣೆಯು ಈಗ ₹ 25 ಸಾವಿರಕ್ಕೆ ಕುಸಿಯುವ ಮೂಲಕ ಬೆಳೆಗಾರರನ್ನು ಕಂಗಾಲಾಗಿಸಿದೆ.
ಮಲೇಷ್ಯಾ ಮತ್ತು ಶ್ರೀಲಂಕಾದಿಂದ ಆಮದು ಆಗುತ್ತಿದ್ದ ಅಡಿಕೆಯ ಮೇಲೆ ಕೇಂದ್ರ ಸರ್ಕಾರವು ಹೆಚ್ಚಿನ ಸುಂಕ ವಿಧಿಸಿದ್ದರಿಂದ ಆಮದು ಪ್ರಮಾಣ ಕಡಿಮೆಯಾಗಿದ್ದರೂ ಬೆಲೆ ಸ್ಥಿರವಾಗಲಿಲ್ಲ. ಕಳೆದ ಒಂದು ತಿಂಗಳಿನಿಂದ ಧಾರಣೆ ಕಡಿಮೆಯಾಗುತ್ತಲೇ ಇದೆ. ಬೆಲೆಯ ತೀವ್ರ ಕುಸಿತದ ಕಾರಣಕ್ಕೆ ಶಿವಮೊಗ್ಗ ಎಪಿಎಂಸಿಯು ನಾಲ್ಕೈದು ದಿನಗಳ ಕಾಲ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಎಪಿಎಂಸಿಯ ಈ ನಿರ್ಧಾರ ಸ್ವಾಗತಾರ್ಹ. ಆದರೆ ದಲ್ಲಾಳಿಗಳು ರೈತರ ಮನೆ ಬಾಗಿಲಿಗೆ ಹೋಗಿ ಅಡಿಕೆ ಖರೀದಿ ಮಾಡುವ ಸಾಧ್ಯತೆ ಇದೆ. ಇಂಥವರಿಗೆ ಅಡಿಕೆ ಮಾರಾಟ ಮಾಡಬೇಡಿ ಎಂದು ಮಲೆನಾಡು ಅಡಿಕೆ ಬೆಳೆಗಾರರ ಸಂಘವು ರೈತರಲ್ಲಿ ಮನವಿ ಮಾಡಿಕೊಂಡಿದೆ. ಸಂಘದ ಈ ಸೂಚನೆಯನ್ನು ರೈತರು ಪಾಲಿಸಿ, ಬೆಲೆ ಏರಿಕೆಗೆ ಸಹಕರಿಸಬೇಕಾಗಿದೆ.
ರಾಜ್ಯ ಸರ್ಕಾರವು ಕೂಡ ಇತ್ತ ಗಮನ ಹರಿಸಿ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು ಅಥವಾ ಬೆಲೆ ಏರಿಕೆಯಾಗುವಂಥ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.