ADVERTISEMENT

ದಾರಿ ತೋರಬೇಕಾದವರೇ ಹಾದಿ ತಪ್ಪಿದರೆ...?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 22:32 IST
Last Updated 16 ಫೆಬ್ರುವರಿ 2021, 22:32 IST

ಕುಣಿಗಲ್‌ನ ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಮನನೊಂದ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಅವರು ಸಮಾಜ ಕಲ್ಯಾಣ ಸಚಿವರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ವರದಿಯಾಗಿದೆ (ಪ್ರ.ವಾ., ಫೆ. 14).

ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಿ ಜನರಿಗೆ ಸೂಕ್ತ ಮಾರ್ಗವನ್ನು ತೋರಿಸಬೇಕಾದ ಸ್ವಾಮಿಗಳೇ ಈ ಮಾರ್ಗ ಹಿಡಿದರೆ ಜನ ಯಾರನ್ನು ನಂಬಬೇಕು? ಸರ್ವಸಂಗ ಪರಿತ್ಯಾಗಿಗಳಾಗಬೇಕಾದ ಸ್ವಾಮಿಗಳು ಒಂದು ಪೀಠದ ಅಧ್ಯಕ್ಷ ಸ್ಥಾನಕ್ಕೆ ಮುಗಿಬಿದ್ದರೆ ಇವರು ಮಾದರಿ ಹೇಗಾದಾರು? ಅಧಿಕಾರಕ್ಕಾಗಿ ಹಾತೊರೆಯುವ ಇವರಿಗೂ ರಾಜಕಾರಣಿಗಳಿಗೂ ವ್ಯತ್ಯಾಸವಾದರೂ ಏನು ಉಳಿದೀತು?
-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT