ADVERTISEMENT

ಸಂಸದರ ಹೇಳಿಕೆ ಖಂಡನೀಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಮಾರ್ಚ್ 2021, 19:31 IST
Last Updated 1 ಮಾರ್ಚ್ 2021, 19:31 IST

ಆದಿವಾಸಿಗಳಿಗೆ ನೀಡುವ ಸವಲತ್ತುಗಳನ್ನು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಬುಡಕಟ್ಟು ಜನರಿಗೆ ವಿತರಿಸಬಾರದು ಎಂಬ ಸಂಸದ ಪ್ರತಾಪ ಸಿಂಹ ಅವರ ಹೇಳಿಕೆ (ಪ್ರ.ವಾ., ಫೆ. 25) ಕ್ರೈಸ್ತ ಸಮುದಾಯದವರ ಮನ ನೋಯಿಸುವಂತಹದ್ದು. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವವರನ್ನೇ ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಎಲ್ಲಾ ಜನಸಮುದಾಯದವರಿಂದ ಆಯ್ಕೆಗೊಂಡ ಸಂಸದರು ಸಂವಿಧಾನದ ಮೂಲ ಆಶಯವನ್ನೇ ಮರೆತಿರುವ ಹಾಗಿದೆ.

‘ಕುತ್ತಿಗೆಯಲ್ಲಿ ಶಿಲುಬೆ ಹಾಕಿಕೊಂಡಿರುವವರನ್ನು ಗುರುತಿಸಬೇಕು. ಅವರಿಗೆ ಸೌಲಭ್ಯ ವಿತರಿಸುತ್ತಿದ್ದರೆ, ಕೂಡಲೇ ನಿಲ್ಲಿಸಬೇಕು. ಮೀಸಲಾತಿ ಸೌಲಭ್ಯ ನೀಡಬಾರದು’ ಎಂದು ಅವರು ಹೇಳಿದ್ದಾರೆ. ಶಿಲುಬೆ ಕ್ರೈಸ್ತರ ಪವಿತ್ರ ಸಂಕೇತ. ಅದನ್ನು ಅವಹೇಳನ ಮಾಡಿರುವುದು ಸರಿಯಲ್ಲ. ಧರ್ಮದಲ್ಲಿ ನಂಬಿಕೆ ಕಳೆದುಕೊಂಡವರಿಗೆ ತಮ್ಮ ಧರ್ಮವನ್ನು ಬದಲಾಯಿಸುವ ಹಕ್ಕು ಸಂವಿಧಾನಬದ್ಧವಾದುದು. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಅವರೇ ತಮ್ಮ ಮೂಲ ಧರ್ಮದ ಬಗ್ಗೆ ಬೇಸತ್ತು, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಮರೆಯಬಾರದು.

- ಎಲ್.ಚಿನ್ನಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.