ADVERTISEMENT

ಬದಲಾವಣೆ ಪೋಷಕರಿಂದಲೇ ಪ್ರಾರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 20:55 IST
Last Updated 11 ಜೂನ್ 2020, 20:55 IST

ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದ ಬಗ್ಗೆ ಚರ್ಚಿಸುತ್ತಿರುವವರು ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಳಕ್ಕೆ ಯಾರು ಕಾರಣ ಎಂಬುದರ ಬಗ್ಗೆಯೂ ಚರ್ಚಿಸಲಿ.

ಕೆಲವು ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದೊಡನೆಯೇ ಅರ್ಜಿ ಪಡೆಯಲು ಶಾಲಾ ಆವರಣದಲ್ಲಿರಾತ್ರಿ ಹಗಲೆನ್ನದೆ ಸರದಿಯಲ್ಲಿ ನಿಲ್ಲುವ ಪೋಷಕರು, ಶುಲ್ಕ ಎಷ್ಟೇ ಹೆಚ್ಚಾದರೂ ಪ್ರವೇಶ ಪಡೆಯಬಯಸುತ್ತಾರೆ. ಕೆಲವು ಬಾರಿ ಶುಲ್ಕ ಕಟ್ಟಲು ಸಿದ್ಧರಿದ್ದರೂ ಸೀಟು ಸಿಗದೆ ಶಾಸಕರು, ಸಂಸದರು, ಸಚಿವರ ಶಿಫಾರಸಿಗಾಗಿ ದುಂಬಾಲು ಬೀಳುತ್ತಾರೆ.

ಸರ್ಕಾರವು ಆರ್‌ಟಿಇ ಮೂಲಕ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಪ್ರವೇಶ ದೊರಕಿಸಿಕೊಟ್ಟರೂ ಖಾಸಗಿ ಶಾಲೆಗಳ ಬಗೆಗಿನ ಪೋಷಕರ ವ್ಯಾಮೋಹ ಕಡಿಮೆಯಾಗುತ್ತಿಲ್ಲ. ಬಹುತೇಕರು ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲೇ ಓದಬೇಕು ಎಂಬ ಹಂಬಲದಲ್ಲಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಮಸ್ಯೆ ಇರುವುದು ನಮ್ಮಲ್ಲೇ.

ADVERTISEMENT

ಎಲ್ಲಿಯವರೆಗೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ಶುಲ್ಕ ಹೆಚ್ಚಳದಂತಹ ಸಮಸ್ಯೆ ಇದ್ದೇ ಇರುತ್ತದೆ. ಖಾಸಗಿ ಶಾಲೆಗಳಿಗೆ ಬದಲಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದರೆ ಖಾಸಗಿ ಶಾಲೆಗಳ ಅಸ್ತಿತ್ವವೇ ಇರುವುದಿಲ್ಲ. ಬೇಡಿಕೆ ಇಲ್ಲದಿದ್ದರೆ ಯಾವ ಶಾಲೆಯೂ ಜೀವಂತವಾಗಿ ಇರುವುದಿಲ್ಲ, ಶುಲ್ಕದ ಸಮಸ್ಯೆಯೂ ಬರುವುದಿಲ್ಲ. ಬದಲಾವಣೆ ಪೋಷಕರಿಂದಲೇ ಪ್ರಾರಂಭವಾಗಲಿ.

-ಅಶೋಕ ಓಜಿನಹಳ್ಳಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.