ADVERTISEMENT

ಕನ್ನಡವನ್ನು ಉಳಿಸುವ ಹೊಣೆ ಸರ್ಕಾರಕ್ಕಿಲ್ಲವೇ?

ಡಾ.ಜಗದೀಶ ವೀ.ನೂಲಿನವರ ಯಾದಗಿರಿ
Published 6 ಜನವರಿ 2019, 20:15 IST
Last Updated 6 ಜನವರಿ 2019, 20:15 IST

‘ಕನ್ನಡಕ್ಕೆ ಕುಠಾರಸ್ವಾಮಿ ಆಗಬೇಡಿ’ ಎಂದು ಚಂಪಾ ಅವರು ಮಾಡಿರುವ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಸಮ್ಮೇಳನದಲ್ಲಿ ಗಲಾಟೆ ಬೇಡ ಎಂದು ಸುಮ್ಮನಾದೆ’ ಎಂದಿದ್ದಾರೆ. ಮುಖ್ಯಮಂತ್ರಿಯ ಈ ಪ್ರತಿಕ್ರಿಯೆ ಅವರ ಘನತೆಗೆ ತಕ್ಕುದಲ್ಲ.

ನಾಡಿನ ಮುಖ್ಯಮಂತ್ರಿಗೆ ಸಲಹೆ ಸೂಚನೆಗಳನ್ನು ನೀಡುವುದು, ದಾರಿ ತಪ್ಪಿದಾಗ ಟೀಕಿಸುವುದು ನಾಗರಿಕರ ವಿಶೇಷವಾಗಿ ಸಾಹಿತಿ, ಬುದ್ಧಿಜೀವಿಗಳ ಹಕ್ಕು. ಅದನ್ನು ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ವೀಕರಿಸಬೇಕು.

ಒಂದು ವರ್ಗದ ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಇಂಗ್ಲಿಷ್‌ ಮೇಲೆ ಪ್ರೀತಿ ಇದೆ ಎಂಬ ಕಾರಣಕ್ಕೆ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ಕೊಡಲು ಆರಂಭಿಸಿದರೆ ಕನ್ನಡವನ್ನು ಕೇಳುವವರು ಯಾರು?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.