ADVERTISEMENT

ಸರ್ಕಾರವೋ ಉದ್ಯಮವೋ?

ಪತ್ತಂಗಿ ಎಸ್.ಮುರಳಿ
Published 6 ಜನವರಿ 2019, 20:15 IST
Last Updated 6 ಜನವರಿ 2019, 20:15 IST

ರಾಜ್ಯ ಸರ್ಕಾರವು ಡೀಸೆಲ್ ಹಾಗೂ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ‘ಬಸ್ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಇನ್ನೊಂದು ವಾರದೊಳಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ (ಪ್ರ.ವಾ., ಜ. 6).

‘ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ತೈಲ ಬೆಲೆ ಕಡಿಮೆ ಇದೆ’ ಎಂಬ ಸಮರ್ಥನೆಯನ್ನು ಸಹ ಮುಖ್ಯಮಂತ್ರಿ ಕೊಟ್ಟಿದ್ದಾರೆ. ಪಕ್ಕದ ರಾಜ್ಯದಲ್ಲಿ ಬಸ್‌ ಪ್ರಯಾಣದ ದರ ನಮ್ಮ ರಾಜ್ಯದಲ್ಲಿರುವುದಕ್ಕಿಂತಲೂ ಕಡಿಮೆ ಎಂಬುದು ಮುಖ್ಯಮಂತ್ರಿ ಗಮನಕ್ಕೆ ಬಂದಿಲ್ಲವೇ?

ತೆರಿಗೆ ಏರಿಸುವ ಮೂಲಕ ಡೀಸೆಲ್ ದರ ಹೆಚ್ಚಿಸುವವರೂ ಇವರೇ, ಡೀಸೆಲ್ ಬೆಲೆ ಏರಿತು ಎಂದು ಪ್ರಯಾಣ ದರ ಹೆಚ್ಚಿಸುವವರೂ ಇವರೇ. ಮುಖ್ಯಮಂತ್ರಿಯವರು ನಡೆಸುತ್ತಿರುವುದು ಸರ್ಕಾರವೋ ಅಥವಾ ಉದ್ಯಮವೋ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.