ADVERTISEMENT

ಸದಸ್ಯತ್ವಕ್ಕೆ ಪರೀಕ್ಷೆ ಅನಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಜನವರಿ 2022, 15:43 IST
Last Updated 24 ಜನವರಿ 2022, 15:43 IST

ಕನ್ನಡಿಗರ ಹೆಮ್ಮೆಯ ಪ್ರತೀಕವಾದ ಮತ್ತು ಶತಮಾನ ದಾಟಿ ಮುಂದೆ ಸಾಗುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ಪರೀಕ್ಷೆಗೆ ಒಳಗಾಗಬೇಕು ಎಂಬ ಮಾತು ಕೇಳಿಬರುತ್ತಿದೆ. ಇಂತಹದೊಂದು ಆದೇಶವನ್ನು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರು ಹೊರಡಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಈಗ ಇರುವ ಸುಮಾರು ಮೂರು ಲಕ್ಷ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸಬೇಕೆಂಬ ಗುರಿ ಹೊಂದಿದ್ದಾರೆ. ಆದರೆ, ಸದಸ್ಯತ್ವಕ್ಕೆ ಪರೀಕ್ಷೆ ಮತ್ತು ಕೋಟಿಯ ಗುರಿ ಎರಡೂ ವಿರುದ್ಧ ದಿಕ್ಕಿನವು.

ಕೆಲವೇ ರೂಪಾಯಿಗಳನ್ನು, ಭಾವಚಿತ್ರ ಮತ್ತು ಕೆಲ ದಾಖಲೆಗಳನ್ನು ನೀಡಿ ಸದಸ್ಯತ್ವ ಪಡೆಯಿರಿ ಎಂದರೇನೆ ಹಿಂದೆ ಸರಿಯುವ ಜನರು, ಇನ್ನು ಪರೀಕ್ಷೆ ಎದುರಿಸಿ ಸದಸ್ಯರಾಗುವುದು ಕನಸಿನ ಮಾತೇ ಸರಿ. ಹೊಸ ಕಾನೂನುಗಳನ್ನು ಮಾಡುವ, ಇರುವ ಕಾನೂನುಗಳಿಗೆ ತಿದ್ದುಪಡಿ ತರುವ ಲೋಕಸಭಾ ಅಥವಾ ವಿಧಾನಸಭಾ ಸದಸ್ಯರಾಗಲು, ಪುರ ಸಭೆಯ ಸದಸ್ಯರಾಗಲು ಇಲ್ಲದ ಯಾವುದೇ ಪರೀಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯಲು ಎದುರಿಸ ಬೇಕೆಂಬುದು ಅರ್ಥಹೀನ. ಇದು ನಿಜವೇ ಆದರೆ ಈ ಆದೇಶ ಹಿಂಪಡೆದು, ಈಗಿರುವಂತೆಯೇ ಸದಸ್ಯತ್ವ ನೀಡಲಿ. ಕನ್ನಡ ನಾಡು, ನುಡಿ, ಜಲ ಮುಂತಾದ ಕುರಿತು ಬಹಳಷ್ಟು ಕೆಲಸಗಳು ಇವೆ. ಅವನ್ನು ಆದ್ಯತೆ ಮೇರೆಗೆ ಮಾಡಿ ಜನ ಮನ್ನಣೆ ಗಳಿಸಲಿ.

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.