ADVERTISEMENT

ಅನ್ಯರಿಗೆ ಅವಕಾಶ ಕೊಟ್ಟಿದ್ದೀರಾ ಸ್ವಾಮಿ?

ವೆಂಕಟೇಶ ಮಾಚಕನೂರ
Published 14 ಮಾರ್ಚ್ 2019, 20:03 IST
Last Updated 14 ಮಾರ್ಚ್ 2019, 20:03 IST

‘ಮತದಾರರೇ ಒಪ್ಪಿದ ಮೇಲೆ ಕುಟುಂಬ ರಾಜಕಾರಣದ ಮಾತೇಕೆ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 14). ಅಬ್ಬಾ ಇದು ಎಂಥ ಮಾತು! ನಿಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರಲ್ಲವೇ ಸ್ವಾಮಿ, ಜನರಿಗೆ ಬೇರೆ ಆಯ್ಕೆಯ ಅವಕಾಶ ಸಿಗುವುದು?

ರಾಜಕಾರಣ ಈಗ ಕೌಟುಂಬಿಕ ದಂಧೆ ಆಗಿದೆ. ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎನ್ನುವ ಒಬ್ಬ ವ್ಯಕ್ತಿ ಸ್ಪರ್ಧಿಸಲಾರದಷ್ಟು ಚುನಾವಣೆ ಕಣವನ್ನು ರಾಜಕೀಯ ಪಕ್ಷಗಳು ಹದಗೆಡಿಸಿ ಇಟ್ಟಿವೆ. ಹೀಗಾಗಿ ಹಾಲಿ ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳೇ ಸ್ಪರ್ಧಿಸಬೇಕು.ಅವರು ಸತ್ತರೆ ಅವರ ಹೆಂಡತಿ ಸ್ಪರ್ಧಿಸಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶಪಾರಂಪರ್ಯ ಆಳ್ವಿಕೆ. ಚುನಾಯಿತ ಹುದ್ದೆಗಳನ್ನು ಎರಡು ಅವಧಿಗೆ ಮಿತಗೊಳಿಸಿ ನಮ್ಮ ಪ್ರಜಾಪ್ರಭುತ್ವವನ್ನು ನಾವು ರಕ್ಷಿಸಿಕೊಳ್ಳದಿದ್ದರೆ ದೇಶದ ತುಂಬೆಲ್ಲ ಕೌಟುಂಬಿಕ ರಾಜಕಾರಣಿಗಳನ್ನು, ಪ್ರಜಾಪ್ರಭುತ್ವದ ಅಣಕು ಪ್ರದರ್ಶನವನ್ನೇ ನಾವು ನೋಡುತ್ತಾ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT