ADVERTISEMENT

ವಾಚಕರ ವಾಣಿ | ಜನಸಾಮಾನ್ಯರಲ್ಲಿ ಮೂಡಲಿ ತಿಳಿವಳಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಜುಲೈ 2022, 21:15 IST
Last Updated 31 ಜುಲೈ 2022, 21:15 IST

ವ್ಯಕ್ತಿಯೊಬ್ಬ ಕೊಲೆಯಾದರೆ ಅದಕ್ಕೆ ಜಾತಿ, ಮತದ ಲೇಪನ ನೀಡುವುದರಿಂದ ಸಮಾಜದ ಸಾಮರಸ್ಯ ಹದಗೆಡುತ್ತದೆ. ಅಷ್ಟೇ ಅಲ್ಲ, ಪರಸ್ಪರ ಸೌಹಾರ್ದದಿಂದ ಬಾಳುತ್ತಿರುವವರ ಮನಸ್ಸಿನಲ್ಲಿ ಅನಗತ್ಯ ಅನುಮಾನಗಳು ಮೂಡುತ್ತವೆ. ವಿಶ್ವಾಸ, ನೆಮ್ಮದಿ ನಾಶವಾಗುತ್ತದೆ. ರಾಜಕಾರಣಿಗಳು ಮತ್ತು ಅವರ ಅನುಯಾಯಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕಿರುತ್ತಾರೆ. ಸಿಕ್ಕ ಅವಕಾಶವನ್ನು ಜಾತಿ, ಧರ್ಮದ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುವ ಪರಿಪಾಟ ಹೆಚ್ಚುತ್ತಿರುವುದು ಕಳವಳಕಾರಿ. ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಸ್ವಾರ್ಥಶಕ್ತಿಗಳ ಒಳಹುನ್ನಾರ ಅರಿತು ಪ್ರಜ್ಞಾವಂತಿಕೆಯನ್ನು ಮೆರೆಯಬೇಕು.

-ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT