ADVERTISEMENT

ವಾಚಕರ ವಾಣಿ | ದೃಶ್ಯ ಮಾಧ್ಯಮಗಳ ಹೊಣೆಗೇಡಿತನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಜುಲೈ 2022, 21:15 IST
Last Updated 31 ಜುಲೈ 2022, 21:15 IST

ಅತ್ಯಾಚಾರ, ಲೈಂಗಿಕ ಹಗರಣ, ಕೊಲೆ ಹಾಗೂ ಕೋಮುವೈಷ್ಯಮದಂಥ ವಿಷಯಗಳನ್ನು ದೃಶ್ಯಮಾಧ್ಯಮದ ಕೆಲವು ವಾಹಿನಿಗಳು ಅತಿರಂಜಿತವಾಗಿ ಪ್ರಸಾರ ಮಾಡುತ್ತಿವೆ. ನೈತಿಕತೆಯ ಪರಿಧಿ ದಾಟಿ, ಸಮಾಜದ ಮೇಲಾಗುವ ಪರಿಣಾಮವನ್ನೂ ಗಮನಿಸದೇ ಇಂತಹ ಸುದ್ದಿಗಳನ್ನು ದಿನವಿಡೀ ಪ್ರಸಾರ ಮಾಡುವುದು ತರವಲ್ಲ. ಇಂಥ ವಿಚಾರಗಳಲ್ಲಿ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೊಂದುವುದು ಅತ್ಯಗತ್ಯ.

ಕೊಲೆ, ಹಲ್ಲೆಯಂಥ ಪ್ರಕರಣಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ನಿರಂತರವಾಗಿ ತೋರಿಸುವ ಅಗತ್ಯವಾದರೂ ಏನಿದೆ? ಸಮಾಜದ ಆರೋಗ್ಯ ಕಾಪಾಡಲು ನೆರವಾಗಬೇಕಾದ ಮಾಧ್ಯಮಗಳೇ ಅದನ್ನು ಕೆಡಿಸುವ ಕೆಲಸ ಮಾಡಬಾರದು.

- ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.