ADVERTISEMENT

ವಾಚಕರ ವಾಣಿ: ಸಂದರ್ಭೋಚಿತ ಎಂದರೆ...?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಡಿಸೆಂಬರ್ 2022, 22:30 IST
Last Updated 22 ಡಿಸೆಂಬರ್ 2022, 22:30 IST

ಸರ್ಕಾರಗಳು ನೀಡುವ ಸಬ್ಸಿಡಿ ಹಾಗೂ ಉಚಿತ ಕೊಡುಗೆಗಳು ಸಂದರ್ಭೋಚಿತವಾಗಿ ಇರಬೇಕು’ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ (ಪ್ರ.ವಾ., ಡಿ. 22). ಸಂದರ್ಭೋಚಿತ ಎಂದರೆ ಚುನಾವಣಾ ಸಂದರ್ಭ ಎಂದು ಭಾವಿಸಬೇಕೇ? ಮತದಾರರನ್ನು ಸೆಳೆಯುವ ಮಾರ್ಗಗಳಲ್ಲಿಇಂತಹ ಉಚಿತ ಕೊಡುಗೆಗಳು ಒಂದು. ಉಚಿತ ಮತ್ತು ಸಬ್ಸಿಡಿ ಸವಲತ್ತುಗಳು ಅರ್ಹರಿಗೆ ತಲುಪುವುದೇ ಇಲ್ಲ. ಬಹುತೇಕವು ಸಂಸದರು, ಶಾಸಕರು ಅಥವಾ ಇನ್ನಾವುದೋ ಜನಪ್ರತಿನಿಧಿಗಳ ಹಿಂಬಾಲಕರಿಗೇ
ದೊರುಕುವುದು.

ಸರ್ಕಾರ ಉಚಿತ ಕೊಡುಗೆಗಳನ್ನು ನೀಡುವುದರ ಮೂಲಕ ಶಕ್ತಿ ಮತ್ತು ಸಾಮರ್ಥ್ಯ ಇರುವವರನ್ನುಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಬದಲಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಹಾದಿ ತೋರಿಸಿ ಅದಕ್ಕೆ ಪರೋಕ್ಷವಾಗಿ ಸಹಾಯ ಮಾಡಿದರೆ, ಬದುಕನ್ನು ಕಟ್ಟಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಈ ಬಗ್ಗೆ ಸರ್ಕಾರ ಚಿಂತಿಸಲಿ.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.