ADVERTISEMENT

ವಾಚಕರ ವಾಣಿ | ಯೋಗ ದಿನಾಚರಣೆ: ರಾಜಕೀಯ ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜೂನ್ 2022, 20:00 IST
Last Updated 15 ಜೂನ್ 2022, 20:00 IST

ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬರುತ್ತಾರೆ ಎಂಬ ಸುದ್ದಿ ಇದೆ. ಪ್ರಧಾನಿ ಈ ಕಾರಣಕ್ಕಾಗಿ ಮೈಸೂರಿಗೆ ಬರುತ್ತಿರುವುದು ಶ್ಲಾಘನೀಯ. ಅವರು ಬಂದರೆ ಪ್ರವಾಸೋದ್ಯಮವು ಮೈಸೂರಿನಲ್ಲಿ ಇನ್ನೂ ಹೆಚ್ಚಿನ ಪ್ರಚಾರದೊಂದಿಗೆ ಚುರುಕಾಗಲಿದೆ. ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಕಾಣಬಹುದು.

ಎರಡು ವರ್ಷಗಳಿಂದ ಕೋವಿಡ್‌ನಿಂದ ಕಳೆಗುಂದಿದ್ದ ನಾಡಹಬ್ಬ ಈ ಬಾರಿ ವೈಭವಯುತವಾಗಿ ನಡೆಯಬಹುದು. ‌ಇದಕ್ಕೆಲ್ಲಾ ಪ್ರಧಾನಿ ಭೇಟಿಯಿಂದ ಪುಷ್ಟಿ ಸಿಕ್ಕಂತೆ ಆಗುತ್ತದೆ. ಅದುಬಿಟ್ಟು ಒಂದು ಪಕ್ಷದ ಕಾರ್ಯಕ್ರಮ ಎಂಬಂತೆ ಪರಿಗಣಿಸಿ ಅದನ್ನು ಆಯೋಜಿಸಿದರೆ, ವಿಶ್ವ ಮಟ್ಟದಲ್ಲಿ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಅಂತರರಾಷ್ಟ್ರೀಯ ಮನ್ನಣೆ ಇರುವ ಯೋಗ ದಿನಾಚರಣೆ ಯಾವುದೇ ಪಕ್ಷದ ಕಾರ್ಯಕ್ರಮ ಆಗಬಾರದು. ಎಲ್ಲ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವ ಯೋಗ ದಿನ ಆಚರಿಸಿದರೆ ಇತಿಹಾಸದಲ್ಲಿ ಈ ಕಾರ್ಯಕ್ರಮ ಶಾಶ್ವತವಾಗಿ ಉಳಿಯುತ್ತದೆ.

- ಹರವೆ ಸಂಗಣ್ಣ ಪ್ರಕಾಶ್,ಹರವೆ, ಚಾಮರಾಜನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.