ADVERTISEMENT

ವಾಚಕರ ವಾಣಿ | ಸಾಲದ ಸುಳಿಯಿಂದ ಪಾರು ಮಾಡಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಫೆಬ್ರುವರಿ 2022, 20:30 IST
Last Updated 14 ಫೆಬ್ರುವರಿ 2022, 20:30 IST

ಉತ್ತಮ ಸಾರಿಗೆ ವ್ಯವಸ್ಥೆಯಲ್ಲಿ ಕೆಎಸ್ಆರ್‌ಟಿಸಿ ದೇಶದಲ್ಲೇ ನಂಬರ್‌ ಒನ್ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರ ವಾಗಿತ್ತು. ಈಗ ರಾಜ್ಯದ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಇಕೆಆರ್‌ಟಿಸಿ) ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿವೆ. ಬಿಡಿಭಾಗಗಳು, ಬ್ಯಾಟರಿ, ಡೀಸೆಲ್‌ ಖರೀದಿ, ಬಸ್‌ಗಳ ನಿರ್ವಹಣೆ, ಡಿಪೊಗಳ ಖರ್ಚು ವೆಚ್ಚ, ನೌಕರರ ಸಂಬಳಕ್ಕೂ ಹಣವಿಲ್ಲದೆ ನಿಗಮಗಳು ಪರದಾಡುತ್ತಿವೆ. ಸಾರಿಗೆ ನಿಗಮಗಳಿಗೆ ಸರ್ಕಾರ ಹಣದ‌ ಸಹಾಯ ಮಾಡದೆ ಕೈಚೆಲ್ಲಿದೆ. ಇದರಿಂದ ನಿಗಮಗಳು ಸಾಲಕ್ಕಾಗಿ ಬ್ಯಾಂಕ್ ಬಾಗಿಲು ಬಡಿಯುತ್ತಿವೆ.

ಸಾರಿಗೆ ನಿಗಮಗಳು ಈ ಸ್ಥಿತಿಗೆ ಬರಲು ಕಾರಣ ಏನು? ಆಡಳಿತ ವೈಫಲ್ಯವೇ? ಸೋರಿಕೆಯೇ? ನಿಯಂತ್ರಣಕ್ಕೆ ಬಾರದ ಅಕ್ರಮಗಳೇ? ಆಡಳಿತ ಮಂಡಳಿಯ ನಿರ್ಲಕ್ಷ್ಯವೇ?ಸರ್ಕಾರ ಕೂಡಲೇ ತನಿಖೆ ನಡೆಸಿ, ಸತ್ಯ ಹೊರತೆಗೆಯಲಿ. ಇವುಗಳಲ್ಲಿ ಏನೇ ಕಾರಣ ಇದ್ದರೂ ಅದನ್ನು ಸರಿ ಮಾಡಿಕೊಂಡು ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ ತಪ್ಪಿಸಲು ಮುಂದಾಗಲಿ.

-ನಬಿಸಾಬ ಆರ್.ಬಿ. ದೋಟಿಹಾಳ,ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT